ಕಾಸರಗೋಡು: ಮನೆಯ ವರಾಂಡದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಯುವಕನೊಬ್ಬ ಮೃತಪಟ್ಟಿದ್ದಾರೆ. ಪಾಣತ್ತೂರು, ಕಲ್ಲಪಳ್ಳಿ, ಪಾಡಿಕೊಚ್ಚಿಯ ಮಲ್ಲನಾಯ್ಕ ಅವರ ಪುತ್ರ ಪಿ.ಕೆ. ಜಯರಾಮ್ (42) ಮೃತ ವ್ಯಕ್ತಿ.
ಶುಕ್ರವಾರ ಸಂಜೆ ಜಯರಾಮ್ ಅವರು ತಮ್ಮ ಸ್ವಂತ ಮನೆಯ ವರಾಂಡದಲ್ಲಿ ಅಸ್ವಸ್ಥಗೊಂಡು ಬಿದ್ದಿರುವುದು ಕಂಡುಬಂದಿತ್ತು. ತಕ್ಷಣವೇ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
ಜಯರಾಮ್ ಅವರ ಸಹೋದರ ಯೋಗೀಶ್ ನೀಡಿದ ದೂರಿನ ಮೇರೆಗೆ, ರಾಜಪುರಂ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Tags
ಕಾಸರಗೋಡು
