ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಅವರ ವಾಹನ ಪ್ರಚಾರ ಜಾಥಾ ಆರಂಭ


 ಕಾಸರಗೋಡು:ಕಾಸರಗೋಡಿನ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಅವರು ನಗರದಲ್ಲಿ ವಾಹನ ಪ್ರಚಾರ ಜಾಥಾವನ್ನು ಆರಂಭಿಸಿದರು. ಈ ಪ್ರಚಾರ ಜಾಥಾವನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಾಕುಟ್ಟಿ ಅವರು ಉದ್ಘಾಟಿಸಿದರು. ಕಾಸರಗೋಡು ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ನಡೆಯಲಿರುವ ಅಶ್ವಿನಿ ಅವರ ಚುನಾವಣಾ ಪ್ರಚಾರ ಸಭೆಗಳಲ್ಲಿ ಅಬ್ದುಲ್ಲಾಕುಟ್ಟಿ ಇಂದು ಮಾತನಾಡಲಿದ್ದಾರೆ.
ಇಂದು ಬೆಳಿಗ್ಗೆ ಹೊಸ ಬಸ್ ನಿಲ್ದಾಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಎನ್‌ಡಿಎ ಅಭ್ಯರ್ಥಿ ಪರವಾಗಿ ಮತ ಯಾಚಿಸಿದರು. ಪ್ರಚಾರದ ವೇಳಾಪಟ್ಟಿ ಈ ಕೆಳಗಿನಂತಿದೆ: ಅನಂತರ ಬಿ.ಸಿ.ರೋಡ್, ಅಣಂಗೂರು, ರೈಲ್ವೇ ಸ್ಟೇಷನ್, ಚೇನಕೋಡು ಎಂಬೆಡೆಗಳಲ್ಲಿ ಕಾರ್ನರ್‌ಮೀಟಿಂಗ್ ನಡೆಯಿತು. ಕೊಲ್ಲಂಕಾನ,ಮಧೂರು, ಚೌಕಿ, ಪೆರಿಯಡ್ಕ, ಪೆರ್ನಡ್ಕ ಮತ್ತು ಉಳಿಯತ್ತಡ್ಕ ಪ್ರದೇಶಗಳಲ್ಲಿ  ಎನ್‌ಡಿಎ ಚುನಾವಣಾ ಪ್ರಚಾರ ಸಭೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು