ಮೂತ್ರಪಿಂಡ (ಕಿಡ್ನಿ) ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಿಕ್ಷಕಿಯೊಬ್ಬರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಞಂಗಾಡ್ ಆವಿಕರೆಯ ಬಲ್ಲಾಕಡಪ್ಪುರಂ ಎ.ಎಲ್.ಪಿ ಶಾಲೆಯ ಶಿಕ್ಷಕಿ, ಕಿಲಕ್ಕೂಕರ ಕುಶವನಕುನ್ನಿನ **ಜ್ಯೋತಿ (51) ಮೃತಪಟ್ಟವರು.
ಇವರು ಕಾಂಞಂಗಾಡ್‌ನ ಪೂರ್ಣಿಮಾ ಮೆಡಿಕಲ್ ಶಾಪ್ ಮಾಲೀಕ ವಿ.ಎಂ ಪ್ರಕಾಶನ್ ಅವರ ಪತ್ನಿಯಾಗಿದ್ದಾರೆ. ತಂದೆ ಕುಂಞಿಕಣ್ಣನ್-ದಿವಂಗತ ಲಕ್ಷ್ಮ ದಂಪತಿಯ ಪುತ್ರಿಯಾದ ಇವರು ಮಕ್ಕಳಾದ ಅಂಜು (ದುಬೈ), ಆಕಾಶ್ (ಮರ್ಚೆಂಟ್ ನೇವಿ) ವಿಶಾಖ್ (ದುಬೈ) ಎಂಬಿವರನ್ನು ಅಗಲಿದ್ದಾರೆ.
Tags
ಕಾಞಂಗಾಡ್
