ಕಾಞಂಗಾಡು: ಸ್ನಾನ ಮಾಡಲೆಂದು ಹೊಳೆಯಲ್ಲಿ ಇಳಿದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ರಾಜಪುರಂ ಟೆಂತ್ ಪಯಸದ ಕಾಲೇಜಿನ ತೃತೀಯ ವರ್ಷ ಬಿ.ಎಸ್.ಸಿ.ಲೈಫ್ ಸಯನ್ಸ್ ವಿದ್ಯಾರ್ಥಿ ಕಾರಕ್ಕೋಡು ವಿ.ಎಂ.ಅಶ್ವಿನ್ ರಾಜ್(19) ಮೃತಪಟ್ಟ ವಿದ್ಯಾರ್ಥಿ. ಹೊಳೆಯಲ್ಲಿ ಸ್ನಾನ ಮಾಡಿದ ನಂತರ ಮೇಲೇರಿದ ಅಶ್ವಿನ್ ರಾಜ್, ಇದೇ ವೇಳೆ ತಾನು ತಂದ ಬಕೆಟ್ ನೀರಿನಲ್ಲಿ ತೇಲಿ ಹೋಗುತ್ತಿರುವುದು ಕಂಡು ಪುನಃ ಹೊಳೆಗಿಳಿದನೆನ್ನಲಾಗಿದೆ. ಈ ವೇಳೆ ಮುಳಿಗಿದನೆನ್ನಲಾಗಿದೆ. ಜತೆಗಿದ್ದವರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.ಮಾಹಿತಿ ತಿಳಿದು ಆಗಮಿಸಿದ ಊರವರು ಅಶ್ವಿನ್ ನನ್ನು ಮೇಲಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಆ ವೇಳೆ ಮೃತಪಟ್ಟಿದ್ದನು. ಮೃತನು ತಂದೆ ರವೀಂದ್ರನ್, ತಾಯಿ ಗಿರಿಜ ಎಂಬಿವರನ್ನು ಅಗಲಿದ್ದಾನೆ.
Tags
ಕಾಞಂಗಾಡ್
