ಚೆರ್ಕಳ: ದಂಪತಿಗಳ ಮೃತದೇಹ ಮನೆಯೊಳಗಿನ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಯ್ನಾಚಿ ಪರಂಬ ನಿವಾಸಿಗಳಾದ ವೇಣುಗೋಪಾಲ, ಪತ್ನಿ ಸ್ಮಿತ ಮೃತಪಟ್ಟವರು. ಇಂದು (ಶುಕ್ರವಾರ) ಬೆಳಗ್ಗೆ ಇವರ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ.
ಎರಡು ತಿಂಗಳ ಹಿಂದೆ ಬೇಕಲದಲ್ಲಿ ನಡೆದ ವೇಡನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇವರ ಒಬ್ಬನೇ ಮಗ ಇಂಜಿನಿಯರಿಂಗ್ ವಿದ್ಯಾರ್ಥಿ ಶಿವಾನಂದ (19) ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಇದರಿಂದ ಮನನೊಂದು ಇವರು ಆತ್ಮಹತ್ಯೆಗೈದಿರಬೇಕು ಎಂದು ಶಂಕಿಸಲಾಗಿದೆ.
Tags
ಕಾಸರಗೋಡು
