ರಬ್ಬ‌ರ್ ತೋಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಕೃಷಿಕ ಮೃತ್ಯು


 ಬದಿಯಡ್ಕ: ರಬ್ಬ‌ರ್ ತೋಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಕೃಷಿಕ ಮೃತಪಟ್ಟ ಘಟನೆ ನಡೆದಿದೆ. ಪಿಲಾಂಕಟ್ಟೆಯ ಅಲಕ್ಕಲ್‌ನ ಜೋಸ್ (74). ‌ಮೃತಪಟ್ಟ ವ್ಯಕ್ತಿ. ವಿದ್ಯಾಗಿರಿಯಲ್ಲಿರುವ ತಮ್ಮ ರಬ್ಬರ್ ತೋಟಕ್ಕೆ ತೆರಳಿದ ಇವರು ಮರಳಿ ಬಾರದ ಹಿನ್ನಲೆಯಲ್ಲಿ ಮನೆಯವರು  ಹುಡುಕಾಟ ನಡೆಸಿದಾಗ ರಬ್ಬರ್ ತೋಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕ೦ಡುಬ೦ದಿದೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಆಗಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಸೂಚಿಸಿದ್ದರು. ಮೃತರು ಪತ್ನಿ ಸೂಸಮ್ಮ ಪುತ್ರ ಆಂಟ್ರೋ. ಸೊಸೆ ಸೀನ ಎಂಬಿವರನ್ನಗಲಿದ್ದಾರೆ. ಬದಿಯಡ್ಕ ಪೊಲೀಸರು ಅಸ್ವಾಭಾವಿಕ ಸಾವಿನ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು