ಬದಿಯಡ್ಕ ನಿವಾಸಿ ಯುವಕ ಚಾಲಕುಡಿಯಲ್ಲಿ ರೈಲಿನಿಂದ ಹೊಳೆಗೆ ಬಿದ್ದು ಮೃತ್ಯು


 ಬದಿಯಡ್ಕ: ಬದಿಯಡ್ಕ ನಿವಾಸಿಯಾದ ಯುವಕ ಚಾಲಕುಡಿಯಲ್ಲಿ ರೈಲಿನಿಂದ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬದಿಯಡ್ಕ ಪೇಟೆಯ ದಿವಂಗತ ರವೀಂದ್ರ ಶೆಣೈ ಅವರ ಪುತ್ರ ಅಚ್ಚು ಯಾನೆ ಅಚ್ಚುತಾನಂದ ಶೆಣೈ (40) ಮೃತಪಟ್ಟ ಯುವಕ. ಇವರು  ಮಲ್ಟಿ ಸ್ಟೇಟ್ ಕೋಪರೇಟಿವ್ ಸೊಸೈಟಿಯ ತ್ತಿಶೂರು ರೀಜಿನಲ್ ಆಫೀಸಿನಲ್ಲಿ ಇನ್ಸ್ಪೆಕ್ಟರ್ ಆಗಿದ್ದರು.  ಉದ್ಯೋಗ ನಿಮಿತ್ತ ಪ್ರವಾಸದ ಮಧ್ಯೆ ಈ ಘಟನೆ ನಡೆದಿದೆ.
ಮೃತರು ತಾಯಿ ರಮಾ ಶೆಣೈ, ಪತ್ನಿ ಅನುಷ್ಕ, ಸಹೋದರಿ ಗಾಯತ್ರಿ ಎಂಬಿವರನ್ನು ಅಗಲಿದ್ದಾರೆ. ಮಾಹಿತಿ ತಿಳಿದು ಸಂಬಂಧಿಕರು ಚಾಲಕುಡಿಗೆ ಸಾಗಿದ್ದಾರೆ.  ಅಚ್ಚುತಾನಂದ ಅವರು ಈ ಹಿಂದೆ ಬದಿಯಡ್ಕ‌ ನಿವಾಸಿಯಾಗಿದ್ದು  ಇದೀಗ ನೀರ್ಚಾಲಿನಲ್ಲಿ ಮನೆ ಮಾಡಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು