ಪೆರ್ಲ: ವಿದ್ಯುತ್ ಶಾಕ್ ತಗುಲಿ ಆಟೋ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಪೆರ್ಲ ಬಳಿಯ ಶಿವಗಿರಿ ನಿವಾಸಿ ಧನರಾಜ್(41) ಮೃತಪಟ್ಟ ಯುವಕ. ಇಂದು (ಬುಧವಾರ) ಮಧ್ಯಾಹ್ನ ಈ ಘಟನೆ ನಡೆದಿದೆ. ಮನೆಯಲ್ಲಿ ಫ್ಯಾನ್ ದುರಸ್ತಿಯ ವೇಳೆ ಇವರಿಗೆ ವಿದ್ಯುತ್ ಶಾಕ್ ತಗುಲಿದೆ. ಕೂಡಲೇ ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಿಲ್ಲ. ಶಿವಗಿರಿ ನಿವಾಸಿ ಕೃಷ್ಣ ನಾಯ್ಕ -ಗಿರಿಜಾ ದಂಪತಿಗಳ ಪುತ್ರನಾದ ಮೃತರು ಪತ್ನಿ ದೀಪಾ, ಮಕ್ಕಳಾದ ನಿಶ್ಮಿತಾ, ವಿಜಿತ್, ಸಹೋದರ ಮೋಹನ್ ಸಹೋದರಿ ಕಮಲಾಕ್ಷಿ,ಮೋಹಿನಿ ಎಂಬಿವರನ್ನಗಲಿದ್ದಾರೆ. ಇವರ ನಿಧನಕ್ಕೆ ಪೆರ್ಲ ಪೇಟೆ ಆಟೋ ಚಾಲಕರು ಸಂತಾಪ ವ್ಯಕ್ತಪಡಿಸಿದ್ದಾರೆ.
Tags
ಪೆರ್ಲ
