ಉಪ್ಪಳ:ಕಯ್ಯಾರು ಅರಿಯಾಳ ತರವಾಡಿನ ಶ್ರೀ ಮಲರಾಯ ಬಂಟ ಧೂಮಾವತಿ ದೈವಗಳಿಗೆ "ಧರ್ಮ ನೇಮೋತ್ಸವ" ವು ಮಾರ್ಚ್ 26 ಗುರುವಾರ, 27 ಶುಕ್ರವಾರಗಳಂದು ಬಹಳ ವಿಜೃಂಭಣೆಯಿಂದ ನಡೆಯಲಿರುವುದು. ತಂತ್ರಿವರ್ಯರಾದ ಬಂಬ್ರಾಣ ಶ್ರೀ ಶಂಕರ ನಾರಾಯಣ ಕಡಮಣ್ಣಾಯರ ನೇತೃತ್ವದಲ್ಲಿ ನವ ಕಲಶಾಭಿಷೇಕ, ಗಣಹೋಮ, ಮುಡಿಪು ಪೂಜೆ ,ನಾಗತಂಬಿಲ, 26ರಂದು ಬೆಳಿಗ್ಗೆ ನಡೆಯಲಿಕ್ಕಿದೆ. ಮಧ್ಯಾಹ್ನ ಗಂಟೆ 1ಕ್ಕೆ ಅನ್ನ ಸಂತರ್ಪಣೆ, ಅಂದು ರಾತ್ರಿ ಗಂಟೆ 8ಕ್ಕೆ ಭಂಡಾರ ಏರಿ ಮಲರಾಯ ಬಂಟ ದೈವಗಳ ಧರ್ಮ ನೇಮೋತ್ಸವ, ಮರುದಿನ ಬೆಳಿಗ್ಗೆ ಶ್ರೀ ಧೂಮಾವತಿ ಪೊಟ್ಟೋಳ್ ದೈವಗಳ ನೇಮ, ನಂತರ ಅನ್ನದಾನ, ಅಂದು ರಾತ್ರಿ 8 ಕ್ಕೆ ಶ್ರೀ ಕಲ್ಲುರ್ಟಿ ,ಪಂಜುರ್ಲಿ ದೈವಗಳ ತಂಬಿಲ, ಪ್ರಸಾದ ವಿತರಣೆ ನಡೆಯಲಿದೆ .ಮನೋರಂಜನ ಕಾರ್ಯಕ್ರಮದಂಗವಾಗಿ 26ರಂದು ಸಂಜೆ 6ರಿಂದ ರಾತ್ರಿ 12 ರ ವರೆಗೆ ಶ್ರೀ ಆದಿ ಧೂಮಾವತಿ ಶ್ರೀದೇಯಿ ಬೈದೇತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ, ಗೆಜ್ಜೆ ಗಿರಿ ಇವರಿಂದ "ಗೆಜ್ಜೆ ಗಿರಿ ಕ್ಷೇತ್ರ ಮಹಾತ್ಮೆ " ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ .
Tags
ಉಪ್ಪಳ
