ನಾಪತ್ತೆಯಾಗಿ ಹೊಳೆಯಲ್ಲಿ‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಬಿ.ಎಲ್.ಒ. ಮೃತ್ಯು


 ಕಾಸರಗೋಡು: ಇಂದು (ಶನಿವಾರ) ಬೆಳಗ್ಗೆ ‌ಮನೆಯಿಂದ ನಾಪತ್ತೆಯಾಗಿ ಅನಂತರ ಹೊಳೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದ ಬಿ.ಎಲ್.ಒ. ಮೃತಪಟ್ಟಿದ್ದಾರೆ. ‌ಮೊಗ್ರಾಲು‌ ಪುತ್ತೂರು ನಿವಾಸಿ ಹಾಗೂ ಚೆರ್ಕಳ ಸರಕಾರಿ ಹಯರ್ ಸೆಕಂಡರಿ ಶಾಲೆಯ ಅಧ್ಯಾಪಕ ಸವಾದ್(32) ಮೃತಪಟ್ಟವರು. ಸವಾದ್ ಅವರು‌ ಮೊಗ್ರಾಲು ಪುತ್ತೂರು  1 ನೇ ಬೂತಿನ‌ ಬಿ.ಎಲ್.ಒ ಆಗಿದ್ದರು. ಇಂದು ಬೆಳಗ್ಗೆ  ಗಂಟೆಯ ವೇಳೆ ಅವರು ಮನೆಯಿಂದ‌ ನಾಪತ್ತೆಯಾಗಿದ್ದು  ಹುಡುಕಾಟ ‌ನಡೆಸಿದಾಗ ಕಡವತ್ ಹೊಳೆಯಲ್ಲಿ‌ ಪ್ರಜ್ಞಾಹೀನ ಸ್ಥಿತಿಯಲ್ಲಿ ‌ಕಂಡು ಬಂದಿದ್ದರು.‌ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ. ಕಾಸರಗೋಡು ‌ನಗರ ಠಾಣಾ ಪೊಲೀಸರು ‌ಕೇಸು ದಾಖಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು