ಮಂಗಲ್ಪಾಡಿ:“ಕಲಾಕುಂಚ” ಕೇರಳ ಗಡಿನಾಡ ಶಾಖೆಯ ಪ್ರಾಯೋಜಕತ್ವದಲ್ಲಿ ಮಹಾಭಾರತದ ಗಮಕ ವಾಚನ ವ್ಯಾಖ್ಯಾನದ ಸಮಾರೋಪ ಸಮಾರಂಭ ಮಂಗಲ್ಪಾಡಿ ಯ ಶ್ರೀ ಶಾರದಾ ಭಜನಾಮಂದಿರದಲ್ಲಿ ಫೆಬ್ರವರಿ ಒಂದನೇ ತಾರೀಕಿನಂದು ನಡೆಯಿತು.ಕಳೆದ ಎರಡೂ ಮುಕ್ಕಾಲು ವರ್ಷಗಳಿಂದ ಪ್ರತಿ ಶನಿವಾರ ಗಮಕ ವಾಚನ ವ್ಯಾಖ್ಯಾನ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಹಾಗೂ ದಿವ್ಯಾ ಕಾರಂತ್ ನಡೆಸಿಕೊಂಡು ಬರುತ್ತಾ ಇದ್ದರು.ಜೊತೆಗೆ ಕೆಲವು ಸಂಧರ್ಭಗಳಲ್ಲಿ ಶ್ರೀಮುರಳಿ ಯಾದವ್ ,ಶ್ರೀ ಶಶಿರಾಜ ನೀಲಂಗಳ,ಶ್ರೀ ಗುರುಮೂರ್ತಿ,ಕುಮಾರಿ ಅನೂಷಾ,ರಾಧಾಮಣಿ ಮೀಯಪದವು ,ಚಂದನ್ ಕಾರಂತ್ ಸಹಕರಿಸಿದ್ದರು.
ಹಿರಿಯರಾದ ಶ್ರೀ ರಾಮಕಾರಂತರು ಮಹಾಭಾರತದ ಕರ್ನಾಟ ಭಾರತ ಕಥಾಮಂಜರಿ ಗ್ರಂಥಕ್ಕೆ ಆರತಿ ಬೆಳಗಿದರು.ಶ್ರೀಮತಿ ದಿವ್ಯಾ ಕಾರಂತ ಗ್ರಂಥವನ್ನು ವೇದಿಕೆಗೆ ತಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಜಯಲಕ್ಷ್ಮಿ ಕಾರಂತ್,ಕಲಾಕುಂಚ ,ಕೇರಳ ಗಡಿನಾಡ ಶಾಖೆಯ ಸಂಸ್ಥಾಪಕರು ವಹಿಸಿದರು., ರಾಮಚಂದ್ರ ಭಟ್,ಪ್ರಾಂಶುಪಾಲರು, ಹೈಯರ್ ಸೆಕೆಂಡರೀ ಸ್ಕೂಲ್ ,ಧರ್ಮತ್ತಡ್ಕ ಮತ್ತು ಶ್ರೀ ಲಿಂಗಪ್ಪ ಪಟೇಲ್ ,ಟ್ರಸ್ಟಿಗಳು, ಶ್ರೀ,ಶಾರದಾ ಏಕಾಹ ಭಜನಾ ಮಂದಿರ ಇವರು ಅತಿಥಿಗಳಾಗಿದ್ದರು..ವೇದಾಂತ್ ಕಾರಂತ್ ಪ್ರಾರ್ಥನೆ ಗೀತೆಹಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಸಭಾಧ್ಯಕ್ಷರು ಮತ್ತು ಅತಿಥಿಗಳು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು..ಕ.ಗ.ಶಾಖೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತರು ಸ್ವಾಗತ ಮತ್ತು ಪ್ರಸ್ಥಾವನೆ ಗೈದರು.ಕ.ಕು.ಗ.ಶಾಖೆಯ ಅಧ್ಯಕ್ಷೆ ರಾಧಾಮಣಿ ಮೀಯಪದವು ಉಪಸ್ಥಿತರಿದ್ದರು.
ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮಕ್ಕೆ ಪ್ರತಿ ಬಾರಿಯೂ ಆಗಮಿಸಿದ್ದ ಮಕ್ಕಳನ್ನು ಮತ್ತು ಪೋಷಕರನ್ನು ಗೌರವಿಸಲಾಯಿತು.ಪುರಸ್ಕೃತ ಮಕ್ಕಳು ತಮ್ಮ ಅಭಿಪ್ರಾಯ ಮಂಡಿಸಿದರು.
ಭಜನಾ ಮಂದಿರದ ವತಿಯಿಂದ ಗಮಕ ವಾಚನ ವ್ಯಾಖ್ಯಾನ ನಡೆಸಿಕೊಂಡು ಬಂದ ಶ್ರೀಮತಿ ಜಯಲಕ್ಷ್ಮಿ ಕಾರಂತ್ ಹಾಗೂ ದಿವ್ಯಾ ಕಾರಂತರನ್ನು ಗೌರವಿಸಲಾಯಿತು.ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀಮತಿ ತಾರಾ ಪ್ರವೀಣ್,ಶ್ರೀ ವಿಜಯ ರೈ, ಶ್ರೀ ಸುರೇಶ ಶೆಟ್ಟಿಪರಂಕಿಲ ತಮ್ಮ ಅಭಿಪ್ರಾಯ ಮಂಡಿಸಿದರು.ಗಮಕ ಕಾರ್ಯಕ್ರಮ ಇಲ್ಲಿಗೇ ನಿಲ್ಲಿಸ ಬಾರದು.ಇದು ನಿರಂತರವಾಗಿ ಮುಂದುವರಿಯಬೇಕು ಎಂದು ಅಭಿಪ್ರಾಯ ಪಟ್ಟರು.
ಶ್ರೀ ರಾಜಾರಾಮ ರಾವ್ ಮೀಯಪದವು,ಶ್ರೀ ರಾಮಕಾರಂತ್,ಶ್ರೀ ಚಂದನ ಕಾರಂತ್ ಉಪಸ್ಥಿತರಿದ್ದರು.ಶ್ರೀಮತಿ ಚೇತನಾ ಹೆಬ್ಬಾರ್,ಶ್ರೀ ಗಣೇಶ್ , ಶ್ರೀಮತಿ ತಾರಾ ಪ್ರವೀಣ್ ಸಹಕರಿಸಿದರು.
ಶ್ರೀಮತಿ ರಾಧಾಮಣಿ ಯವರು ವಂದನಾರ್ಪಣೆ ಗೈದರು.ಶ್ರೀಮತಿ ಜಯಲಕ್ಷ್ಮಿ ಆರ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
