ಮುಳ್ಳೇರಿಯ: ಇಲ್ಲಿನ ಕೋಟೂರಿನಲ್ಲಿ ಕಾರ್ಯಾಚರಿಸುತ್ತಿರುವ ಹುರಿಹಗ್ಗ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಲಕ್ಷಾಂತರ ರೂ.ನಷ್ಡ ಉಂಟಾಗಿದೆ. ಕೋಟೂರಿನಲ್ಲಿ ಕಾರ್ಯಾಚರಿಸುತ್ತಿರುವ ಸ್ಕಂದ ಕಯರ್ ಪ್ರೊಡೆಕ್ಟ್ ಎಂಬ ಸಂಸ್ಥೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ರಾತ್ರಿ 9 ಗಂಟೆಯ ವೇಳೆ ಬೆಂಕಿ ಅಕಸ್ಮಿಕ ಉಂಟಾಗಿದ್ದು ಮಾಹಿತಿ ತಿಳಿದು ಕಾಸರಗೋಡು, ಕುತ್ತಿಕೋಲು ಎಂಬೆಡೆಗಳಿಂದ ಆಗಮಿಸಿದ ಅಗ್ನಿಶಾಮಕ ದಳ ಸಿಬಂದಿಗಳು ಊರವರ ಸಹಕಾರದೊಂದಿಗೆ ಗಂಟೆಗಳ ಕಾಲ ನಡೆಸಿದ ಪ್ರಯತ್ನದ ನಂತರ ಬೆಂಕಿ ನಂದಿಸಿದರು. ಲಕ್ಷಾಂತರ ರೂ ನಷ್ಟ ಅಂದಾಜಿಸಲಾಗಿದೆ.
Tags
ಮುಳ್ಳೇರಿಯ

