ವಿಷ ಸೇವಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿ ಮೃತ್ಯು


 ಕಾಸರಗೋಡು: ವಿಷ ಸೇವಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಪೊವ್ವಲ್ ಬೆಂಚ್ ಕೋರ್ಟ್ ಬಳಿಯ ಗಲ್ಫ್ ಉದ್ಯೋಗಿಯ ಪತ್ನಿ,  ದಲ್ಲಿ ತವರು ಮನೆಯಿರುವ ಜಸೀಲ(24) ಮೃತಪಟ್ಟ ಯುವತಿ.  ಈ ತಿಂಗಳ 15 ರಂದು ಈಕೆ ವಿಷ ಸೇವಿಸಿದ್ದು ಈಕೆಯನ್ನು ಇಂದಿರ ನಗರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ (ಶುಕ್ರವಾರ) ಆಕೆ ಕೊನೆಯುಸಿರೆಳೆದರು. 

    ಚಿನ್ನದ ಸರ ನಾಪತ್ತೆಯಾದ ಪ್ರಕರಣವೊಂದರಲ್ಲಿ ಜಸೀಲಳನ್ನು ಆದೂರು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಈಕೆ ನಿರಪರಾಧಿ ಎಂದು ಪೊಲೀಸರು ಸಾರಿದ್ದರು. ಈ ಘಟನೆಯ ನಂತರ ಆಕೆ ಮಾನಸಿಕವಾಗಿ ನೊಂದಿದ್ದಳು ಎಂದು ತಿಳಿದು ಬಂದಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು