ಕೊಲ್ಲಂಗಾನ ಸಂತ ಥಾಮಸ್ ಚರ್ಚ್ ನಲ್ಲಿ ಉಚಿತ ಕ್ಯಾನ್ಸರ್ ಜಾಗೃತಿ ಹಾಗೂ ತಪಾಸಣಾ ಶಿಬಿರ


 ಕಾಸರಗೋಡು:  ಸಂತ ಥಾಮಸ್ ಚರ್ಚ್ ಕೊಲ್ಲಂಗಾನ ದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಪೋರ್ಟೆಡ್ ಬೈ ಒರಾಕಲ್ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಹಾಸ್ಪಿಟಲ್, ಮಂಗಳೂರು ಇದರ ಸಹಯೋಗದಲ್ಲಿ ನಡೆದ ಉಚಿತ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರದಲ್ಲಿ 80ಕ್ಕೂ ಹೆಚ್ಚು ಮಂದಿ ಬಾಯಿ, ಗರ್ಭ ಕಂಠ, ಸ್ತನ ಕ್ಯಾನ್ಸರ್ ತಪಾಸಣೆ ಮಾಡಿಕೊಂಡರು.

ಈ ಕಾರ್ಯಕ್ರಮದ ಕುರಿತು ಮಾತನಾಡಿದ ಫಾದರ್ ರಿತೇಶ್ ಎ ಎಲ್ ರೊಡ್ರಿಗಸ್ ಆರೋಗ್ಯ ತಪಾಸಣೆ ಶಿಬಿರವನ್ನು ಯಶಸ್ವಿಗೊಳಿಸಿದ  ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್  ಹಾಸ್ಪಿಟಲ್, ಮಂಗಳೂರು ಇವರಿಗೆ ಧನ್ಯವಾದಗಳು ತಿಳಿಸಿದರು.

ವೈದ್ಯರಾದ ಡಾ. ಕುಮಾರ್ ಎಸ್ ವಶಿಷ್ಠ, ಡಾ. ಆಯಿಷಾ, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಮೆಡಿಕಲ್ ಸೋಶಿಯಲ್ ವರ್ಕರ್ ವಿಷ್ಣು ಪ್ರಸಾದ್ ಐ ಮತ್ತು ತಂಡ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು