ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಮಿತ್ರ ಕಲಾ ವೃಂದ


 ಮಧೂರು: ಕಳೆದ 50 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಶೈಕ್ಷಣಿಕ ಕ್ರೀಡಾ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಗೊಂಡಿರುವ ಮಿತ್ರ ಕಲಾ ವೃಂದದ ಸುವರ್ಣ ಮಹೋತ್ಸವದ ಆಚರಣಾ ಸಿದ್ದತಾ ಸಭೆ ಜರಗಿತು. ಮಿತ್ರ ಕಲಾ ವೃಂದದ ಸರ್ವ ಸದಸ್ಯರು ಹಿತೈಷಿಯರು ಊರ ಪರವೂರ ಗಣ್ಯರು ಮಧೂರು ಸೇವಾ ಸಹಕಾರಿ ಬೇಂಕ್ ಸಭಾಂಗಣದಲ್ಲಿ ಜರಗಿದ ಸಭೆಯಲ್ಲಿ ಭಾಗವಹಿಸಿದರು. ಸಭೆಯನ್ನು ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಸಭೆಯನ್ನು ಉದ್ಘಾಟಿಸಿದರು, ಕಲಾ ವೃಂದದ ಅಧ್ಯಕ್ಷರಾದ ಚಂದ್ರಗೋಪಾಲ ಅಧ್ಯಕ್ಷತೆ ವಹಿಸಿದರು, ಮಧೂರು ಗ್ರಾಮ ಪಂಚಾಯತ್ ಸದಸ್ಯರಾದ ಯೋಗೀಶ್ ಎಂ. ಆರ್. ಶಮೀಮಾ ಶರೀಫ ಸಂಘದ ಹಿರಿಯ ಸದಸ್ಯರಾದ ಚಂದ್ರಹಾಸ ಮಧೂರು, ಸಹಕಾರಿ ಬೇಂಕ್ ಅಧ್ಯಕ್ಷ ಪ್ರಭಾಶಂಕರ ಮಾಸ್ಟರ್, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ನವೀನ್ ಎಲ್ಲಂಗಳ, ಸೃಜಾವಿನೋದ್ ಶುಭ ಹಾರೈಸಿದರು. ಸುವರ್ಣ ಮಹೋತ್ಸವದ ಯಶಸ್ವಿಗೆ ಸ್ವಾಗತ ಸಮಿತಿ ರೂಪಿಕರಿಸಲಾಯಿತು. ಕಾರ್ಯದರ್ಶಿ ಮಧುಕರ ಗಟ್ಟಿ ಸ್ವಾಗತಿಸಿದರು. ಚಂದ್ರಗೋಪಾಲ ಅವರು ಅಧ್ಯಕ್ಷ ಭಾಷಣದಲ್ಲಿ ಮಿತ್ರಕಲಾವೃಂದ ಬೆಳೆದು ಬಂದ ಬಗ್ಗೆಯನ್ನು ಮತ್ತು ಸುವರ್ಣ ಮಹೋತ್ಸವ ಆಚರಣೆಯ ಕುರಿತು ವಿವರಿಸಿದರು. ಕೋಶಾಧಿಕಾರಿ ಸುಜಿತ್ ಆಚರಣಾ ಸಮಿತಿ ಪದಾಧಿಕಾರಿಗಳ ಹೆಸರು ವಾಚಿಸಿದರು. ಧನಂಜಯ ಮಧೂರು ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಮಧೂರು ವಂದನಾರ್ಪಣೆ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು