ಮುಸ್ಲಿಂ ಲೀಗ್ ಆಡಳಿತಾಧಿಕಾರಿಗಳು ಜನರಿಗೆ ಮಾಡುವ ಅಪಮಾನ ಹಾಗೂ ಅನ್ಯಾಯ ನಿಲ್ಲಿಸಬೇಕು:ಬಿಜೆಪಿ


 ಕಾಸರಗೋಡು: ವಾರ್ಡ್ ಮಟ್ಟದ ಅಭಿವೃದ್ಧಿ ಗೆ ಕೇವಲ 8ಲಕ್ಷ ಮೀಸಲಿಟ್ಟಿರುವ ಕಾಸರಗೋಡು ನಗರಸಭೆ ಲೀಗ್ ಆಡಳಿತಾಧಿಕಾರಿಗಳ  ತೀರ್ಮಾನ ಜನರಿಗೆ ಮಾಡಿದ ಅಪಮಾನ ಹಾಗೂ .2026-2 7ಆರ್ಥಿಕ ವರ್ಷದಲ್ಲಿ ವಾರ್ಡ್ ಮಟ್ಟದಲ್ಲಿ ಅಭಿವೃದ್ಧಿ ಗೊಳಿಸಲು ನಿಗದಿಪಡಿಸಿದ ಅನುದಾನ ಕೇವಲ 8ಲಕ್ಷ . ವಿಷಯ ಅಂದರೆ ಈ 8ಲಕ್ಷ ಕೇವಲ ಟಾರಿಂಗ್ ಹಾಗೂ ಡ್ರೈನೇಜ್ ವರ್ಕ್ ಮಾತ್ರ.ರೋಡ್ ಕಾಂಕ್ರೀಟ್ ವರ್ಕ್ ಇದರಲ್ಲಿ ಬರೋದಿಲ್ಲ. ನಗರ ಸಭೆಯಲ್ಲಿ ಕಳೆದ ಸುಮಾರು ವರ್ಷದಿಂದ ಟಾರಿಂಗ್ ವರ್ಕಿಗೆ ಟೆಂಡರ್ ಹಾಕುವ ಗುತ್ತಿಗೆದಾರರು ವಿರಳ.ಗುತ್ತಿಗೆದಾರರಿಗೆ ಇದರಲ್ಲಿ ಲಾಭ ಇಲ್ಲದ ಕಾರಣ ಟಾರಿಂಗ್ ವರ್ಕ್ ಟೆಂಡರ್ ಮೂಲಕ ತೆಗೆಯಲು ಬಹುತೇಕ ಯಾರು ತಯಾರಾಗುವುದಿಲ್ಲ. ಇಂತಹ ಪರಿಸ್ಥಿತಿ ಕಾಸರಗೋಡು ನಗರ ಸಭೆ ಯಲ್ಲಿ ಇರುವಾಗ ಈ ವರ್ಷ ಫಂಡ್ ಕೇವಲ ಟಾರಿಂಗ್ ಗೆ ಮಾತ್ರ ಎಂದು ನಿಗದಿಪಡಿಸುವುದು ಜನಸಾಮಾನ್ಯ ಮತದಾರರಿಗೆ ಲೀಗ್ ಮಾಡುವ ಅಪಮಾನ ಹಾಗೂ ಅನ್ಯಾಯ ಇದನ್ನು ತಕ್ಷಣ ಸರಿಪಡಿಸಬೇಕು . ವಾರ್ಡ್ ಅಭಿವೃದ್ಧಿಗೆ ನೀಡುವ ಅನುದಾನವನ್ನು ಹೆಚ್ಚಿಸಬೇಕು ಟಾರಿಂಗ್ ಮಾತ್ರ ಅಲ್ಲ ಕಾಂಕ್ರೀಟ್, ಅಂಗನವಾಡಿ, ಸರ್ಕಾರಿ ಕಟ್ಟಡ ನವೀಕರಣ, ಡ್ರೈನೇಜ್ ಮುಂತಾದ ಎಲ್ಲಾ ಕೆಲಸಗಳಿಗೂ ಅನುದಾನ ಒದಗಿಸಿಕೊಡಬೇಕು ಎಂದು ನಗರಸಭಾ ವಿಪಕ್ಷ ನಾಯಕ ರವೀಂದ್ರ ಪೂಜಾರಿ ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು