ಮೀಯಪದವಿನಲ್ಲಿ ಹಿಂದು ಸಮಾಜೋತ್ಸವ; ನಾಮರಸ್ಯಕ್ಕಾಗಿ ಹಿಂದೂ ಸಮಾಜ ಸಂಘಟಿತವಾಗ ಬೇಕು ಶ್ರೀಕಾಂತ ಶೆಟ್ಟಿ ಕಾರ್ಕಳ


ಮೀಯಪದವು: ಮೀಂಜ ಪಂಚಾಯತ್ ಮಟ್ಟದ ಹಿಂದೂ ಸಮಾಜೋತ್ಸವು ಮೀಯಪದವಿನಲ್ಲಿ ಜರಗಿತು ಆಶೀರ್ವಚನವಿತ್ತ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಅವರು ಸಮಾಜೋತ್ಸವ ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯವೆಸಗುತ್ತಿದೆ. ನಮ್ಮ ಸಮಾಜ ಯಾರ ಮೇಲೂ ಆಕ್ರಮಣ ಮಾಡಿಲ್ಲ ಆದರೆ ನಮ್ಮ ಸಂಸ್ಕೃತಿಗಳ ಮೇಲೆ ಪ್ರಹಾರವಾದಾಗ ಪ್ರಬಲವಾಗಿ ಪ್ರತಿಭಟಿಸಿದ ಚರಿತ್ರೆ ಇದೆ. ಆದ್ದರಿಂದ ಹಿಂದೂ ಸಂಸ್ಕೃತಿಗೆ ದಕ್ಕೆಯಾಗದಂತೆ ನಾವು ಜಾಗೃತರಾಗಿರಬೇಕು. ಮರದ ಬೇರಿನಂತೆ ಸದಾ ಸಮಾಜದ ಅಭ್ಯುದಯಕ್ಕೆ ಎಲ್ಲರೂ ದುಡಿಯಬೇಕೆಂದು ಕರೆ ಇತ್ತರು.
 ಆಶಯ ಭಾಷಣಮಾಡಿದ ಶ್ರೀಕಾಂತ ಶೆಟ್ಟಿ ಕಾರ್ಕಳ ಅವರು ಹಿಂದೂ ಸಮಾಜದ ರಕ್ಷಣೆಗಾಗಿ ಹಲವರ ಬಲಿದಾನವಾಗಿದೆ ಕೆಚ್ಚೆದೆಯ ವೀರರಿಂದ ಹಿಂದೂ ಸಂಸ್ಕೃತಿಯ ರಕ್ಷಣೆಯಾಗಿದೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನಮಾಜವನ್ನು ಸಂಘಟಿಸಿದೆ ಹಾಗೂ ಸ್ವ ಬೋಧವನ್ನು ಮೂಡಿಸಿದೆ ಅದರ ಸವಿಯನ್ನು ನಾವಿಂದು ಉಣ್ಣುತ್ತಿದ್ದೇವೆ ಆದರೆ ಮೈಮರೆಯದೆ ಸಾಮರಸ್ಯದ ಬದುಕಿಗಾಗಿ ನಾವೆಲ್ಲ ಸಂಘಟಿತರಾಗಿ ಇರಬೇಕು ದೇಶಕ್ಕಾಗಿ ಬದುಕುವ ಸಂಕಲ್ಪ ತೊಡಬೇಕು ಎಂದು ಕಿವಿ ಮಾತನಾಡಿದರು.



 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀಂಜ ಗ್ರಾಮ ಪಂಚಾಯತಿನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ ಯವರು ಹಿಂದೂ ಸಮಾಜದ ಕಾರ್ಯ ಕ್ರಮದಲ್ಲಿ ನಾವೆಲ್ಲರೂ ರಾಜಕೀಯ ಜಾತಿ ವಿಚಾರಗಳನ್ನು ಬದಿಗೊತ್ತಿ ಒಂದಾಗಿ ಸೇರಬೇಕು.
ಯುವಕರಿಂದ ಸಂಘಟಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಂತೋಷ ವಾಗುತ್ತಿದೆ ಎಂದರು ಕಾರ್ಯಕ್ರಮದ ಪೂರ್ವ ಭಾವಿಯಾಗಿ ಪ್ರಚಾರಕ್ಕಾಗಿ ಶತ ದ್ವಿಚಕ್ರ ವಾಹನ ಪರ್ಯಟನೆ ನಡೆದಿತ್ತು ಕಾರ್ಯಕ್ರಮದಲ್ಲಿ ಶತಕಂಠ ವಿಷ್ಣು ಸಹಸ್ರನಾಮ ಪಠನ ಶತ
    ಕಂಠ ಭಗವದ್ಗೀತೆ ಪಾರಾಯಣ ಪುರಾಣ, ಚಾರಿತ್ರಿಕ ವ್ಯಕ್ತಿಗಳ ವೇಷ ಪ್ರದರ್ಶನ ಗಳು ಶತ ಸಂಖ್ಯೆಯ ಕುಣಿತ ಭಜನೆ ನಡೆಯಿತು. ಸಂಘಟನಾ ಸಮಿತಿಯ ಅಧ್ಯಕ್ಷರಾದ ಡಾ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿಯವರು ಕಾರ್ಯಕ್ರಮದ ಔಚಿತ್ಯ ವನ್ನು ಪ್ರಾಸ್ತಾವಿಕ ವಾಗಿ ನುಡಿದು ಸ್ವಾಗತಿಸಿದರು. ಶ್ರೀ ಮನೀಶ್ ಸಂತಡ್ಕ ವಂದಿಸಿದರು.ಶ್ರೀ ಹರ್ಷ ರಾಜ್ ಹಾಗೂ ಶ್ರೀ ರಾಜಾರಾಮ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು