ಕಾಸರಗೋಡು: ಬಿಜೆಪಿಯ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಜಿಲ್ಲೆಯ 6 ಕಡೆಗಳಲ್ಲಿ ಸಾರ್ವಜನಿಕರಿಗೆ ನಡೆದಾಡುವ ಸೇತುವೆ (Foot over bridge) ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಆದೇಶ ನೀಡಿದ್ದಾರೆ. ಅಡ್ಕತ್ತಬೈಲು, ಸಿ.ಪಿ.ಸಿ.ಆರ್.ಐ, ಮೊಗ್ರಾಲು ಕುನ್ನು, ಐಲ, ಕನಿಲ, ಗೋವಿಂದ ಪೈ ಕಾಲೇಜು ಪರಿಸರ ಎಂಬೆಡೆಗಳಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಇದು ನಿರ್ಮಿಸುವುದರೊಂದಿಗೆ ಈ ಪ್ರದೇಶದ ಜನರ ಬಹುಕಾಲದ ಕನಸು ನನಸಾಗಲಿದೆ. ಇದಕ್ಕಾಗಿ ಶ್ರಮಿಸಿದ ಬಿಜೆಪಿ ಮಾಜಿ ಅಧ್ಯಕ್ಷ ಕೆ.ಸುರೇಂದ್ರನ್, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ಕೋಜಿಕ್ಕೋಡ್ ವಲಯ ಉಪಾಧ್ಯಕ್ಷ ವಿಜಯ ಕುಮಾರ್ ರೈ ಎಂಬಿವರನ್ನು ಸಾರ್ವಜನಿಕರು ಅಭದಿಸಿದ್ದಾರೆ
Tags
ಕಾಸರಗೋಡು
