ಮೀಯಪದವು ; ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ಸಂದರ್ಭ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಶ್ರೀ ಮಹಾಲಿಂಗೇಶ್ವರ ಸೇವಾಟ್ರಸ್ಟ್ ನ ಕೋಶಾಧಿಕಾರಿಗಳೂ ಆಗಿರುವ ಜಗದೀಶ ಶೆಟ್ಟಿ ಎಲಿಯಾಣ ಅವರಿಗೆ ಕ್ಷೇತ್ರದ ವತಿಯಿಂದ ಆಭಿನಂದನಾ ಕಾರ್ಯಕ್ರಮ, ಹಾಗೂ ಕ್ಷೇತ್ರ ಮೇಲ್ವಿಚಾರಕರಾದ ಗಣಪತಿಭಟ್ ಅಮ್ಮೆನ, ಅವರಿಗೆ ಗೌರವಾರ್ಪಣೆ ಗಣ್ಯರ ಸಮಕ್ಷಮ ಜರಗಿತು. ಸಾಧಕರನ್ನು ದಂಪತಿಗಳ ಸಹಿತ ಗೌರವಿಸಿದ ಸಮಾರಂಭದಲ್ಲಿ.. ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದಿನೇಶ ಕೃಷ್ಣ ತಂತ್ರಿಗಳು ವರ್ಕಾಡಿ ಗೌರವ ಉಪಸ್ಥಿತರಿದ್ದು ಆಶೀರ್ವದಿಸಿದರು, ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ನ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕ ನಿವೃತ್ತ ಪ್ರಾಂಶುಪಾಲರೂ ಆಗಿರುವ ಪ್ರೊ|| ಪಿ,ಎನ್,ಮಂಡಿತ್ತಾಯ ಭಾಗವಹಿಸಿದ್ದರು. ಕ್ಷೇತ್ರ ಆಡಳಿತ ಮೊಕ್ತಸರ ವಸಂತ ಭಟ್ ತೊಟ್ಟೆತ್ತೋಡಿ, ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ ಅಧ್ಯಕ್ಷೆ ಸತೀಶ್ಚಂದ್ರ ರೈ ದೇರಂಬಳ ಉಪಸ್ಥಿತರಿದ್ದರು.
ರಾಜಾರಾಮ ರಾವ್ ಮೀಯಪದವು ಅಭಿನಂದನಾ ನುಡಿಗಳನ್ನಾಡಿದರು. ಸದಾಶಿವ ರಾವ್ ಟ್ರಡಿ, ಸ್ವಾಗತಿಸಿ, ಪುಷ್ಪರಾಜ ಶೆಟ್ಟಿ ತಲೇಕಳ ನಿರೂಪಿಸಿದರು. ರಾಧಾಕೃಷ್ಣ ರಾವ್ ಕೋಡಾಚೆ ಸನ್ಮಾನ ಪತ್ರ ವಾಚಿಸಿದರು, ಯೋಗೀಶ ರಾವ್ ಚಿಗುರುಪಾದೆ ವಂದನಾರ್ಪಣೆ ಗೈದರು,
Tags
ಉಪ್ಪಳ
