ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 172 ಲೀಟರ್ ವಿದೇಶ‌ ಮದ್ಯ ವಶ, ಚಾಲಕನ ಸೆರೆ


 ಮುಳ್ಳೇರಿಯ: ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 172.8 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯವನ್ನು ಎಕ್ಸ್ಪ್ರೆಸ್ ಸ್ಪೆಶಲ್ ಸ್ಕಾಡ್ ವಶಪಡಿಸಿದೆ. ಇದಕ್ಕೆ ಸಂಬಂಧಪಟ್ಟಂತೆ‌ ನಾಯ್ಕಾಪು ನಿವಾಸಿ ಧನಂಜಯ ಪೂಜಾರಿ (35) ಎಂಬಾತನನ್ನು ಬಂಧಿಸಲಾಗಿದೆ. 

              ‌‌ಆದೂರು‌ ಮೊಯಂದಪಾರ ಎಂಬಲ್ಲಿ ಕಾರ್ಯಾಚರಣೆ ನಡೆದಿದೆ. ಈ‌ ಪ್ರಕರಣವನ್ನು ಬದಿಯಡ್ಕ ಎಕ್ಸ್ಪ್ರೆಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಪ್ರಿವೆಂಟಿವ್ ಆಫೀಸರ್ ಕೆ.ವಿ.ರಂಜಿತ್ ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇತರ ಅಧಿಕಾರಿಗಳಾದ ಸೋನು ಸೆಬಾಸ್ಟಿಯನ್, ಶೈಲೇಶ್ ಕುಮಾರ್, ಸುಧೀರ್ ಪಾರಮ್ಮಲ್, ಮಂಜುನಾಥ, ಕಬೀರ್, ಸಾಜನ್, ಕ್ರಿಸ್ಟಿನ್.ಪಿ.ಎ ಮೊದಲಾದವರು ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು