ಬಿಜೆಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ‌ ಪಂಡಿತ ದೀನ ದಯಾಳ್ ಉಪಾಧ್ಯಾಯ ಸಂಸ್ಮರಣೆ


ಕಾಸರಗೋಡು: ಜನಸಂಘ ಸ್ಥಾಪಕ ಪಂಡಿತ ದೀನ ದಯಾಳ್ ಉಪಾಧ್ಯಾಯ ಅವರ  ಬಲಿದಾನ ದಿನದ ಅಂಗವಾಗಿ ಸಂಸ್ಮರಣೆ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮ ಕಾಸರಗೋಡು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿತು. ಪಕ್ಷದ ಜಿಲ್ಲಾ ಅದ್ಯಕ್ಷೆ ಅಶ್ವಿನಿ ಎಂ.ಎಲ್.ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಪಿ.ರಮೇಶ್ ಅಧ್ಯಕ್ಷತೆ ವಹಿಸಿದರು.  ಜಿಲ್ಲಾ ಪ್ರಧಾನ ಕಾರ್ಯದರ್ಶಿ ‌ಪಿ.ಆರ್.ಸುನಿಲ್,  ಜಿಲ್ಲಾ ಸೆಲ್ ಸಂಯೋಜಕ ಸುಕುಮಾರ ಕುದ್ರೆಪ್ಪಾಡಿ, ಇತರರಾದ ರಾಧಾಕೃಷ್ಣ ಸೂರ್ಲು, ರಮೇಶ್ ಕಡಪ್ಪುರಂ ಮೊದಲಾದವರು ಮಾತನಾಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು