ಅಸೌಖ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ‌ ನಿಧನ


 ನೀರ್ಚಾಲು: ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಿದಲಾಗಿದ್ದ ಸಂಘ ಪರಿವಾರ ಕಾರ್ಯಕರ್ತ ನಿಧನರಾದರು. ಕಿಳಿಂಗಾರು ಬಳಿಯ ಮುಂಡಾಂತ್ತಡ್ಕ ನಿವಾಸಿ ದಿವಂಗತ ರಾಮಚಂದ್ರರ ಪುತ್ರ ಲೋಕೇಶ್ (45) ಮೃತಪಟ್ಟವರು. ಇಂದು  ಮುಂಜಾನೆ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

 ಎರಡು ದಿನಗಳ ಹಿಂದೆ ಅವರನ್ನು ಮಿದುಳಿನಲ್ಲಿ‌ ಉಂಟಾದ ರಕ್ತಸ್ರಾವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ತಾಯಿ ಸುಮತಿ ಪತ್ನಿ ಸ್ಮಿತ (ಬ್ಯಾಂಕ್‌ ಉದ್ಯೋಗಿ) ಪುತ್ರಿ ತುಷಾರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.  ಮುಂಡಾಂತ್ತಡ್ಕ ದುರ್ಗಾ ಶಾಖೆಯ ವ್ಯವಸ್ಥಾ ಪ್ರಮುಖರಾಗಿ ಲೋಕೇಶ್ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಏಕಲವ್ಯ ಬಾಲಗೋಕುಲ, ಮಜಿರ್ಪಳ್ಳಕಟ್ಟೆ ಹಾಗೂ ಪರಿಸರದ ಯುವಕೇಸರಿ, ಸಾಯಿ ಫ್ರೆಂಡ್ಸ್ ಯುವಕರ ತಂಡಗಳಲ್ಲಿಯೂ ಸಕ್ರಿಯರಾಗಿದ್ದರು

1 ಕಾಮೆಂಟ್‌ಗಳು

ನವೀನ ಹಳೆಯದು