ಎಡನೀರು: ಚೆಂಗಳ ಪಂಚಾಯತ್ ಸಮಿತಿಯ ನೇತೃತ್ವದಲ್ಲಿ ಮಾರ್ಚ್ 8ರಂದು ಎಡನೀರಿನಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಚೆಂಗಳ ಪಂಚಾಯತ್ ಸಮಿತಿಯ ಮುಖ್ಯ ರಕ್ಷಾಧಿಕಾರಿ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಇಂದು ಶ್ರೀ ಎಡನೀರು ಮಠದಲ್ಲಿ ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಸಮಿತಿಯ ರಕ್ಷಾಧಿಕಾರಿಗಳಾದ ಶ್ರೀ ರಾಜೇಂದ್ರ ಕಲ್ಲೂರಾಯರು, ಶ್ರೀ ಎಡನೀರು ಮಠದ ವ್ಯವಸ್ಥಾಪಕ ಶ್ರೀ ವಿಷ್ಣುಮೂರ್ತಿ ಕಕ್ಕಿಲ್ಲಾಯರು ಬೇವಿಂಜೆ, ಶ್ರೀ ಮಾಧವ ಹೇರಳ ಕಳೆರಿ, ಸಂಘಟನಾ ಸಮಿತಿಯ ಅಧ್ಯಕ್ಷ ಶ್ರೀ ಸತೀಶ ಕೆಮ್ಮಂಗಯ, ಸಂಯೋಜಕ ಶ್ರೀ ಅನಿಲ್ ಪೈಕ, ಕೋಶಾಧಿಕಾರಿ ಶ್ರೀ ಶಿವಪ್ರಸಾದ ಐಲುಕುಂಜೆ, ಶ್ರೀ ರಾಘವೇಂದ್ರ ಕೆದಿಲಾಯ, ಎಡನೀರು ಮಠದ ಪದಾಧಿಕಾರಿಗಳು, ಶ್ರೀ ವೇಣು ಮಾಸ್ಟರ್ ಎಡನೀರು, ಸುನಿಲ್ ಕುದ್ರೆಪ್ಪಾಡಿ ಸಾಮಾಜಿಕ ಕಾರ್ಯಕರ್ತರು ಹಾಗೂ ಇತರ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
Tags
ಎಡನೀರು

