ವಿಕಸಿತ ಬದಿಯಡ್ಕ ಯೋಜನೆ; ದೆಹಲಿಗೆ ತೆರಳಲಿರುವ ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ.ಡಿ


  ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ.ಡಿ.ಅವರು ಫೆಬ್ರವರಿ 9 (ಸೋಮವಾರ) ದೆಹಲಿಗೆ ತೆರಳುವರು.  ಬಿಜೆಪಿ ಕೇಂದ್ರ ನೇತೃತ್ವ ಹಾಗೂ ಕೇಂದ್ರ ಸರಕಾರದ ಆಹ್ವಾನದಂತೆ ಅವರು ದೆಹಲಿಗೆ ತೆರಳಲಿದ್ದಾರೆ. ಅವರು ಬದಿಯಡ್ಕ ಗ್ರಾಮ ಪಂಚಾಯತಿನ ಸಮಗ್ರ ಚಿತ್ರಣವನ್ನು ಬಿಜೆಪಿ ಕೇಂದ್ರ ನೇತೃತ್ವದ ಹಾಗೂ ಕೇಂದ್ರ ಸರಕಾರದ ಮುಂದಿಡಲಿದ್ದಾರೆ. 25 ವರ್ಷಗಳ ನಂತರ ಬದಿಯಡ್ಕ ಗ್ರಾಮ ಪಂಚಾಯತು ಆಡಳಿತ ಪಡೆದ ಬಿಜೆಪಿಗೆ ಇದೊಂದು  ವರದಾನವಾಗಿದೆ.ವಿಕಸಿತ ಬದಿಯಡ್ಕ ಎಂಬ ಬಿಜೆಪಿಯ ಯೋಜನೆಯ ಸಾಕಾರಕ್ಕೆ ಮುಂದಿನ ದಿನಗಳಲ್ಲಿ ವೇಗ ಮೂಡಲಿದೆ. ಶಂಕರ ಡಿ ಅವರು ಫೆಬ್ರವರಿ 13 ರಂದು ಹಿಂತಿರುಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು