ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಭಾಗ್ಯಶ್ರೀ ಆರ್. ಅವರಿಗೆ ಡಾಕ್ಟರೇಟ್


ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಭಾಗ್ಯಶ್ರೀ ಆರ್. ಅವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ಪ್ರೀತಿ ಕೀರ್ತಿ ಡಿಸೋಜ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ  "ಎನ್ ಎಂಪಿರಿಕಲ್ ಸ್ಟಡಿ ಆಫ್ ಲೈವಿಲಿವುಡ್ ಪ್ಯಾಟರ್ನ್ ಆಫ್ ಸಿವಿಕ್ ಎಂಪ್ಲಾಯಿಸ್ ಎಂಗೇಜ್ಡ್ ಇನ್ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್" (An empirical study of livelihood pattern of civic employees engaged in solid waste management in Dakshina Kannada district) ಎಂಬ ವಿಷಯದ ಕುರಿತಾಗಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ ಎಚ್ ಡಿ ಪದವಿ ನೀಡಿ ಗೌರವಿಸಿದೆ. ಇವರು  ಯನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್  ಅಡಿಯಲ್ಲಿ ನೀಡಲಾಗುವ ಯುಜಿಸಿ ನೆಟ್ ಜೆ  ಆರ್ ಎಫ್ (UGC- NET- JRF) ಯೋಜನೆಡಿಯಲ್ಲಿ ಪಿ ಹೆಚ್ ಡಿ ಮಾಡಿರುತ್ತಾರೆ. 

ಇವರು ಆಲೆಟ್ಟಿ ಗ್ರಾಮ ರಂಗತ್ತಮಲೆ ನಿವಾಸಿಗಳಾದ ಶ್ರೀಯುತ ಆರ್. ಎಲ್. ಜನಾರ್ಧನ ಹಾಗೂ ಶ್ರೀಮತಿ ಲೀಲಾವತಿ ಯವರ ಪುತ್ರಿ ಹಾಗೂ *ಎಣ್ಮಕಜೆ ಕರೋಡಿ, ಹೊಸಗದ್ದೆ ಮೂಲೆ ಸತ್ಯನಾರಾಯಣ ಪ್ರಸಾದ್ ಕಾಮತ್* ರವರ ಪತ್ನಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು