ಕ್ಯಾಂಪ್ಕೊ ಸಂಸ್ಥೆಯ "ಸಾಂತ್ವನ" ಯೋಜನೆ; ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರ ಕುಟುಂಬಕ್ಕೆ ಚಿಕಿತ್ಸಾ ಸಹಾಯ ಹಸ್ತಾಂತರ


 ಕ್ಯಾಂಪ್ಕೊ ಸಂಸ್ಥೆಯ "ಸಾಂತ್ವನ" ಯೋಜನೆಯಡಿಯಲ್ಲಿ, ಕ್ಯಾಂಪ್ಕೊ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಶ್ರೀಮತಿ ಸಂಧ್ಯಾ ಕುಮಾರಿ ಇವರ ಪತಿ ಶ್ರೀ ಹರ್ಷ ಕುಮಾರ್ ಅವರ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಕ್ಯಾಂಪ್ಕೊ ವತಿಯಿಂದ ನೀಡಲಾಗುವ ₹50,000/- ಸಹಾಯಧನದ ಚೆಕ್ಕನ್ನು ಸಂಸ್ಥೆಯ ಗೌರವಾನ್ವಿತ ಉಪಾಧ್ಯಕ್ಷರಾದ ಶ್ರೀ ಪದ್ಮರಾಜ ಪಟ್ಟಾಜೆ ಇವರು ಸದಸ್ಯರ ನಿವಾಸದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶ್ರೀ ಚಂದ್ರ ಎಂ, ಪ್ರಾದೇಶಿಕ ವ್ಯವಸ್ಥಾಪಕರು, ಬದಿಯಡ್ಕ ಹಾಗೂ ಬದಿಯಡ್ಕ ಶಾಖೆಯ ವ್ಯವಸ್ಥಾಪಕರಾದ ಶ್ರೀ ಶ್ಯಾಂ ಪ್ರಶಾಂತ ಬಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು