ಸಂಕಲ್ಪ ಅಕಾಡೆಮಿ ನೇತೃತ್ವದಲ್ಲಿ ಪೆರ್ಲ ನಾಲಂದ ಕಾಲೇಜಿನಲ್ಲಿ ಐಎಎಸ್‌ ಆಕಾಂಕ್ಷಿಗಳಿಗೆ ತರಬೇತಿ


  
ಪೆರ್ಲ: ಸಂಕಲ್ಪ ಐಎಎಸ್‌ ಅಕಾಡೆಮಿ ನೇತೃತ್ವದಲ್ಲಿ ನಾಲಂದ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಪೆರ್ಲ ನಾಲಂದ ಕಾಲೇಜಿನಲ್ಲಿ ಐಎಎಸ್‌ ಆಕಾಂಕ್ಷಿಗಳಿಗೆ ಶನಿವಾರ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು. 

ಅಕಾಡೆಮಿ ವರ್ಕಿಂಗ್ ಚೇರ್ಮನ್ ಕೆ.ವಿ.ಜಯರಾಜನ್ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಐಎಎಸ್‌ ಸೇರಿದಂತೆ ಕೇಂದ್ರ ಸರಕಾರದ ಸೇವೆಯ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಸರಿಯಾದ ಮಾರ್ಗದರ್ಶನ ಪಡೆದು ದೃಢಸಂಕಲ್ಪ, ನಿಯಮಿತ ಅಧ್ಯಯನದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು ಎಂದರು. 

ಕೋರ್ಸ್‌ ಕೋ-ಆರ್ಡಿನೇಟರ್ ಹರಿಗೋವಿಂದ್, ಯುಪಿಎಸ್‌ಸಿ ಪರೀಕ್ಷೆ ಮಾದರಿ, ಅಧ್ಯಯನ ವಿಧಾನ, ಸಮಯ ನಿರ್ವಹಣೆ ಹಾಗೂ ಯಶಸ್ಸಿನ ತಂತ್ರಗಳ ಕುರಿತು ಮಾರ್ಗದರ್ಶನ ನೀಡಿದರು. 

ಕಾಲೇಜು ಆಡಳಿತ ಮಂಡಳಿ ಗೌರವಾಧ್ಯಕ್ಷ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲೆ ಶಿಕ್ಷಕ ಪ್ರಭಾಕರನ್ ನಾಯರ್, ನಾಲಂದ ಕಾಲೇಜು ಪ್ರಿನ್ಸಿಪಾಲ್ ಶಂಕರ ಖಂಡಿಗೆ, ಆಡಳಿತ ಮಂಡಳಿ ಸದಸ್ಯರು, ವಿಶೇಷ ಆಹ್ವಾನಿತರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಜಯಗೋವಿಂದ ಉಕ್ಕಿನಡ್ಕ ಸ್ವಾಗತಿಸಿದರು. ಕಲಾ ವಿಭಾಗದ ಮುಖ್ಯಸ್ಥೆ  ಆಶಾಲತಾ ವಂದಿಸಿದರು. ಉಪನ್ಯಾಸಕಿ ಅನುಪಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು