ಚಿನ್ನು ಪಾಪು ಆತ್ಮಹತ್ಯೆ; ಪೋಸ್ಟ್ ಮಾರ್ಟಂ ಇಂದು; ಹಲವರಿಂದ ಮಾಹಿತಿ ಪಡೆಯಲು ಪೊಲೀಸರ‌ ನಿರ್ದಾರ


 ಕಾಸರಗೋಡು: ನೇಣು ಬಿಗಿದ ರೀತಿಯಲ್ಲಿ ‌ಕಂಡು ಬಂದ ಸಾಮಾಜಿಕ ಮಾಧ್ಯಮ ಕಾರ್ಯಕರ್ತೆ ಚಿನ್ನು ಪಾಪು ಯಾನೆ ರೇಶ್ಮಳ ಪೋಸ್ಟ್ ಮಾರ್ಟಂ ಇಂದು ನಡೆಯಲಿದೆ. ಇಂದು ಬೆಳಗ್ಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ‌ಪೋಸ್ಟ್ ಮಾರ್ಟಂ‌ ನಡೆಯಲಿದೆಯೆಂದು  ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಅಸಹಜ ಸಾವು‌ ಪ್ರಕರಣದಂತೆ  ಕೇಸು ದಾಖಲಿಸಿರುವ‌ ಪೊಲೀಸರು ಹಲವರ‌ ವಿಚಾರಣೆ ಆರಂಭಿಸಿದ್ದಾರೆ. ಚಿನ್ನುಪಾಪು ಜತೆ ನಿಕಟ ಬಾಂಧವ್ಯ ಹೊಂದಿದ್ದ ವ್ಯಕ್ತಿಯನ್ನು ಸಹ ವಿಚಾರಣೆಗೆ‌ ಒಳಪಡಿಸಲಾಗುತ್ತಿದೆ  ಎಂದು ಪೊಲೀಸರು ತಿಳಿಸಿದ್ದಾರೆ.

     ಆದೂರು ನಿವಾಸಿಯಾದ ಚಿನ್ನುಪಾಪುವಿನ ಮೃತದೇಹ   ಸೋಮವಾರ ನಗರ ಬಳಿಯ ಬಾಡಿಗೆ‌ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಕೂಡಲೇ ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಆಕೆ ಪ್ರಾಣ ಬಿಟ್ಟಿದ್ದಳು. ಆದೂರು ನಿವಾಸಿ ಗಂಗಾಧರನ್- ಶೈಲಜ ದಂಪತಿಯ ಪುತ್ರಿಯಾದ ಆಕೆಗೆ ರತೀಶ್, ರಂಜಿತ್ ಎಂಬ ಸಹೋದರರಿದ್ದಾರೆ. ಈ ಹಿಂದೆ ವಿವಾಹಿತೆಯಾಗಿದ್ದ ಚಿನ್ನುಪಾಪುವಿಗೆ 4 ವರ್ಷದ ಪುತ್ರನಿದ್ದಾನೆ. ತಿಂಗಳುಗಳ ಹಿಂದೆ  ಆ ಸಂಬಂಧ ಬೇರ್ಪಟ್ಟಿತ್ತು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು