ಮಧೂರು: ಇತ್ತೀಚೆಗೆ ಜೆ ಜೆ ಬಿ ಎಸ್ ಮಧೂರು ಶಾಲೆಗೆ ಮೇಲಿನ ಮನೆ ದಿವಂಗತ ಎಂ ವಿ ಕಲ್ಲೂರಾಯರ ಅವರ ಹೆಸರಿನಲ್ಲಿ ಪುತ್ರ ನಿವೃತ್ತ ನ್ಯಾಯಾಧೀಶ ರಾಜ್ ಕುಮಾರ್ ರವರು ನಿರ್ಮಿಸಿದ ನೂತನ ಪ್ರವೇಶ ದ್ವಾರವನ್ನು ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜ್ಞಾನಿ ಶಾನುಬೋಗ್ ಉದ್ಘಾಟಿಸಿದರು.
ಪಿಟಿಎ ಅಧ್ಯಕ್ಷ ನರೇಂದ್ರ ಕೆ.ಪಿ.ಅಧ್ಯಕ್ಷತೆ ವಹಿಸಿದರು. ಕೆ.ಶಶಿಕಲ ಟೀಚರ್ ವರದಿ ವಾಚಿಸಿದರು.ನಿವೃತ್ತ ತಹಶಿಲ್ದಾರ್ ಬಾಲಕೃಷ್ಣ ನಂಬೀಶನ್, ಡಿ.ವೈ.ಎಸ್.ಪಿ. ಸಿ.ಕೆ.ಸುನಿಲ್ ಕುಮಾರ್, ಆಗಸ್ಟಿನ್ ಬರ್ನಾಡ್ ಮೊಂತೇರೊ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
Tags
ಕಾಸರಗೋಡು
