ಕಾರಡ್ಕ ಪಂಚಾಯತು ಮಟ್ಟದ ಹಿಂದೂ ಏಕತಾ ಸಮ್ಮೇಳನ ಮಾರ್ಚ್ 8 ರಂದು, ಆಮಂತ್ರಣ ಪತ್ರ ಬಿಡುಗಡೆ


ಮುಳ್ಳೇರಿಯ:  ಮಾರ್ಚ್ 8 ರಂದು‌‌ ನಡೆಯಲಿರುವ ಕಾರಡ್ಕ ಪಂಚಾಯತು‌ ಮಟ್ಟದ  ಹಿಂದು ಏಕತಾ ಸಮ್ಮೇಳನದ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಲಾಯಿತು
 ಸ್ವಾಗತ ಸಂಘ ಗೌರವಾಧ್ಯಕ್ಷ ರಾಮಕೃಷ್ಣ ಭಟ್  ಚೆನ್ನಂಗೋಡು ಅವರು ರಕ್ಷಾಧಿಕಾರಿ ಕುಂಟಾರು ರವೀಶತಂತ್ರಿ ಅವರಿಗೆ ನೀಡುವ ಮೂಲಕ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಸ್ವಾಗತ ಸಂಘ ಅಧ್ಯಕ್ಷ ಎಂ.ಕೆ.ರಾಘವನ್ ಅಧ್ಯಕ್ಷತೆ ವಹಿಸಿದರು.
ತಾಲೂಕು ಸಹ ಸಂಂಯೋಜಕ್ ದೀಪಕ್, ಕಾರಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಜನನಿ, ಉಪಾಧ್ಯಕ್ಷ ದಾಮೋದರ ರಾವ್, ಜನಪ್ರತಿನಿಧಿಗಳು, ನೇತಾರರು ಭಾಗವಹಿಸಿದರು. ಸ್ವಾಗತ ಸಂಘ‌ ಕಾರ್ಯದರ್ಶಿ ಎ.ರಾಮಚಂದ್ರ ಸ್ವಾಗತಿಸಿ‌ ಕೋಶಾಧಿಕಾರಿ ರಾಜೇಶ್ ವಂದಿಸಿದರು. ಮಾರ್ಚ್ 8 ರಂದು 3.30 ಕ್ಕೆ ಮುಳ್ಳೇರಿಯ ವಿ.ಆರ್.ಎಸ್ ಮೈದಾನದಲ್ಲಿ ಹಿಂದು ಏಕತಾ ಸಮ್ಮೇಳನ ನಡೆಯಲಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು