ರಾಷ್ಟ್ರೀಯ ಹೆದ್ದಾರಿಯಲ್ಲಿ‌ ಫುಟ್ ಓವರ್ ಬ್ರಿಡ್ಜ್ ಮಂಜೂರು; ಕನಿಲ, ಐಲ ಎಂಬೆಡೆಗಳಿಗೆ‌ ಬಿಜೆಪಿ‌ ನಿಯೋಗ ಬೇಟಿ


 

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊಸತಾಗಿ ಫುಟ್ ಓವರ್ ಬ್ರಿಡ್ಜ್ ಮಂಜೂರಾದ‌ ಕನಿಲ, ಐಲ ಪ್ರದೇಶಗಳ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಹಾಗೂ ಇತರ ಮುಖಂಡರು ಬೇಟಿ ನೀಡಿದರು. ಐಲ ಕ್ಷೇತ್ರ ಟ್ರಸ್ಟಿ ನಾರಾಯಣ ಹೆಗ್ಗಡೆ, ಕನಿಲ ಕ್ಷೇತ್ರ ಪದಾಧಿಕಾರಿಗಳು, ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಇತರರಾದ ವಸಂತ‌‌ ಮಯ್ಯ, ವತ್ಸರಾಜ್ ಕೆ.ಪಿ, ವೀರಪ್ಪ ಅಂಬಾರ್, ಮೋಹನದಾಸ್ ಐಲ, ಕಿಶೋರ್ ಕುಮಾರ್, ಮಾಳಿಗ ಅಬ್ದುಲ್ಲ ಮೊದಲಾದವರು ಉಪಸ್ಥಿತರಿದ್ದರು.

   ಬಿಜೆಪಿ ನೇತಾರರುಗಳ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಫುಟ್ ಓವರ್ ಬ್ರಿಡ್ಜ್ ಮಂಜೂರಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು