ಕುಂಬಳೆ: ನಾಪತ್ತೆಯಾದ ಐಟಿಐ ವಿದ್ಯಾರ್ಥಿನಿ ಹಾಗೂ ಆಕೆಯ ಗೆಳೆಯ ಪರಶಿನಿಕಡವು ಕ್ಷೇತ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ. ನೀರ್ಚಾಲು ಬಳಿಯ ಮೆಣಸಿನರಪಾರೆ ನಿವಾಸಿ ಯಜ್ಞಶ್ರೀ (20) ಹಾಗೂ ಗೆಳೆಯ ಕಾಸರಗೋಡು ನೆಲ್ಲಿಕುನ್ನು ನಿವಾಸಿ ಹಿತೇಷ್ ಎಂಬಿವರೇ ನವದಂಪತಿಗಳು. ಇವರು ನಿನ್ನೆ (ಗುರುವಾರ) ವಿವಾಹವಾಗಿದ್ದು ಇಂದು ಪೊಲೀಸ್ ಠಾಣೆಗೆ ಹಾಜರಾಗಲಿದ್ದಾರೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಸೀತಾಂಗೋಳಿ ಬಳಿಯ ಐಟಿಐಯ ವಿದ್ಯಾರ್ಥಿನಿಯಾಗಿರುವ ಯಜ್ಞಶ್ರೀ ನಿನ್ನೆ ಬೆಳಗ್ಗೆ ಶಿಕ್ಷಣ ಸಂಸ್ಥೆಗೆಂದು ಹೋಗಿದ್ದಳು. ಆದರೆ ಆಕೆ ತರಗತಿಗೆ ತಲುಪಿರಲಿಲ್ಲ. ಈ ಬಗ್ಗೆ ತಾಯಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು.ಪೊಲೀಸರು ತನಿಖೆ ನಡೆಸುತ್ತಿದ್ದಂತೆಯೇ ಇಬ್ಬರೂ ವಿವಾಹವಾದ ಮಾಹಿತಿ ಲಭಿಸಿದೆ.
Tags
ಕುಂಬಳೆ
