ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಶೀಘ್ರದಲ್ಲಿ ನಗರಸಭೆ ಒದಗಿಸಬೇಕು: ಬಿಜೆಪಿ


ಕಾಸರಗೋಡು ನಗರಸಭೆಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದೆ.. ಕಳೆದ 1 ವರ್ಷವಾಗಿ ಜನ ಸಾಮಾನ್ಯರು ನೀಡಿದ ಅರ್ಜಿಗೆ ಪರಿಹಾರ ಕಾಣಲು ಸಾಧ್ಯವಾಗಿಲ್ಲ. ಅರ್ಜಿ ಯಾವ ಸೆಕ್ಷನಲ್ಲಿದೆ, ಇದಕ್ಕೆ ಪರಿಹಾರ ಏನು ಎಂದು ಕೇಳಲು ಬಂದ ಜನಸಾಮಾನ್ಯರಿಗೆ ಸರಿಯಾದ ಉತ್ತರ ಲಭಿಸುತ್ತಿಲ್ಲ. ಒಂದು ಕೆಲಸಕೋಸ್ಕರ ಹಲವು ಬಾರಿ ಮುನ್ಸಿಪಾಲಿಟಿ ಹತ್ತಿ ಇಳಿಯುವ ಪರಿಸ್ಥಿತಿ. ಇಂಜಿನಿಯರಿಂಗ್ ಸೆಕ್ಷನ್ ನಲ್ಲಿ ಸಮಯ ಪರಿಧಿಯಲ್ಲಿ ಯಾವ ಕೆಲಸಕಾರ್ಯಗಳು ನಡೆಯೋದಿಲ್ಲ. ಇದನ್ನು ಸರಿಪಡಿಸಬೇಕು ಕೆಲಸ ಕಾರ್ಯಗಳಿಗೆ ವೇಗ ನೀಡಬೇಕು.ಬಾಕಿ ಇರುವ  ಅರ್ಜಿಗಳಿಗೆ ಶೀಘ್ರದಲ್ಲಿಯೇ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಬಿಜೆಪಿ ಹೋರಾಟಕ್ಕೆ ಇಳಿಯಲಿದೆ ಎಂದು ನಗರಸಭಾ ಚೇರ್ಪರ್ಸೊನ್ ಜೊತೆ ಬಿಜೆಪಿ ಕೌನ್ಸಿಲರ್ ಗಳು ಚರ್ಚೆ ನಡೆಸಿ ಮನವಿ ಸಲ್ಲಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು