ಹುಚ್ಚು ನಾಯಿ ಕಚ್ಚಿ ಸಾಕುದನ ಸತ್ತ ಪ್ರಕರಣ; ಮನನೊಂದು ಕೃಷಿಕ ಆತ್ಮಹತ್ಯೆ


 ಬೋವಿಕಾನ: ಹುಚ್ಚುನಾಯಿ ಕಡಿತದಿಂದ ದನ ಸಾವನ್ನಪ್ಪಿದ ಬೆನ್ನಿಗೆಯೇ ಕೃಷಿಕನಾದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಮುಳಿಯಾರು ಕೋಟೂರು ನಿವಾಸಿ ನಾರಾಯಣ(80) ಮೃತಪಟ್ಟ ವ್ಯಕ್ತಿ. ಇಂದು (ಶುಕ್ರವಾರ) ಮುಂಜಾನೆ ಅವರು ಚೆಂಗಳ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

 ಎರಡು ದಿನಗಳ ಹಿಂದೆ ನಾರಾಯಣ ಅವರ ದನಕ್ಕೆ ಹುಚ್ಚುನಾಯಿ ಕಚ್ಚಿತ್ತು. ದನಕ್ಕೆ ಚುಚ್ಚುಮದ್ದು ನೀಡಲಾಗಿದ್ದರೂ ಅದು ಸತ್ತುಹೋಯಿತು. ಇದರಿಂದ ನಾರಾಯಣ ಅವರು ಮನನೊಂದಿದ್ದರು. ನಿನ್ನೆ ಬೆಳಗ್ಗೆ ಅವರು ಮನೆಯ ಬಳಿಯ ಹಿತ್ತಲಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ಅವರು ಕೊನೆಯುಸಿರೆಳೆದರು. ಆದೂರು ಪೊಲೀಸರು ಕೇಸು ದಾಖಲಿಸಿದರು. ಮೃತರು ಪತ್ನಿ ಪದ್ಮಾವತಿ, ಮಕ್ಕಳಾದ ವಿನೋದ್, ವಿಜು, ಬಿಂದು ಎಂಬಿವರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು