ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟಿದ್ದಾರೆ. ಬೇಡಗಂ ತೋರೋತ್‌ನ ದಿವಂಗತ ನಾರಾಯಣ್ ಅವರ ಪುತ್ರಿ ಹರಿಶ್ರೀ (40) ಅವರು ಇಂದು (ಶುಕ್ರವಾರ) ಮುಂಜಾನೆ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು.
ಜುಲೈ 21 ರಂದು ಹರಿಶ್ರೀ ಮನೆಯ ಶೌಚಾಲಯದಲ್ಲಿ ಸೀಮೆ ಎಣ್ಣೆ ಮೈಮೇಲೆ ಸುರಿದು ಬೆಂಕಿ ಹಚ್ಚು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ಮೊದಲು ಮಂಗಳೂರಿನ ಆಸ್ಪತ್ರೆಗೂ, ನಂತರ ಕೋಜಿಕ್ಕೋಡು ಮೆಡಿಕಲ್ ಕಾಲೇಜು ಆಸ್ಪತ್ರೆಗೂ ದಾಖಲಿಸಲಾಗಿತ್ತು. ಅಲ್ಲಿ ಕೆಲಕಾಲ ಚಿಕಿತ್ಸೆ ನೀಡಿದ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಕಳೆದ ದಿನವಷ್ಟೇ ಅವರಿಗೆ ಪ್ಲಾಸ್ಟಿಕ್ ಸರ್ಜರಿ ನಡೆಸಲಾಗಿತ್ತು. ಇದರ ಮಧ್ಯೆ ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ. ಹರಿಶ್ರೀ ಅವರ ಚಿಕಿತ್ಸೆಗಾಗಿ ಸ್ಥಳೀಯರು ಧನಸಹಾಯ ಸಂಗ್ರಹಿಸಿ ನೆರವು ನೀಡಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ತಾಯಿ ಸರೋಜಿನಿ, ಪತಿ: ವಿಜಯ್ (ಮಂಗಳೂರು), ಪುತ್ರ: ಅಖಿಲೇಶ್ (ಕುಂಡಂಕುಳಿ ಶಾಲಾ ವಿದ್ಯಾರ್ಥಿ ಸಹೋದರರಾದ ಪ್ರದೀಪನ್, ಅನೀಶ್, ಹರೀಶ್, ರತೀಶ್ ಎಂಬಿವರನ್ನು ಅಗಲಿದ್ದಾರೆ.
Tags
ಕಾಞಂಗಾಡ್
