ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಹಾತ್ಮಾ ಗಾಂಧಿ ಜನ್ಮದಿನಾಚರಣೆ


 ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.    ಕಾರ್ಯಕ್ರಮದಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ನಂತರ ನಡೆದ  ಸಭೆಯಲ್ಲಿ  ಬದಿಯಡ್ಕ ಮಂಡಲ  ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈ , ಕಾರಡ್ಕ ಬ್ಲೋಕು ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ನಾರಾಯಣ ಮಣಿಯಾಣಿ ನೀರ್ಚಾಲು , ಗಂಗಾಧರ ಗೋಳಿಯಡ್ಕ , ಸರಶೀರ್ವಾಕ್ಷನ್ ನಂಬ್ಯಾರ್ , ರಾಮ ಪಟ್ಟಾಜೆ ,  ಕೃಷ್ಣದಾಸ್ ಡಿ , ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ ,  ಮಂಡಲ ತಲ  ನೇತಾರರಾದ ಕುಮಾರನ್ ನಾಯರ್ , ಚಂದ್ರಹಾಸನ್ ಮಾಸ್ಟರ್ , ಮುಹಮ್ಮದ್ ಅರಮನೆ, ವಾಮನ ನಾಯ್ಕ,  ಸತೀಶನ್ ಪೆರುಮುಂಡ ,  ಸುಧೀರ್ ಬಾಂಜತ್ತಡ್ಕ , ರಾಮಕೃಷ್ಣನ್ , ರವೀಂದ್ರ ಕುಂಟಾಲ್ ಮೂಲೆ ,  ಮ್ಯಾಥ್ಯೂ , ರಾಜನ್ ಮಾನ್ಯ ಮೊದಲಾದವರು ಉಪಸ್ಥಿತರಿದ್ದರು. ಮಂಡಲ ಸಮಿತಿ ಕಾರ್ಯದರ್ಶಿ ಲೋಹಿತಾಕ್ಷನ್ ಸ್ವಾಗತಿಸಿ , ಕೇಶವ ಪಾಟಾಳಿ ಬದಿಯಡ್ಕ ಧನ್ಯವಾದವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು