ಫುಟ್ಬಾಲ್ ಆಟ ಮುಗಿಸಿ ಗೆಳೆಯರ ಜತೆ ಮನೆಗೆ ಹಿಂತಿರುಗುವ ವೇಳೆ ಒಂಬತ್ತನೇ ತರಗತಿ ವಿದ್ಯಾರ್ಥಿ ಕುಸಿದು ಬಿದ್ದು ಮೃತ್ಯು


 ಕಣ್ಣೂರು: ಫುಟ್ಬಾಲ್ ಆಟ ಮುಗಿಸಿ ಮನೆಗೆ ಹಿಂತಿರುಗುವ  ವೇಳೆ ಒಂಬತ್ತನೇ ತರಗತಿ ವಿದ್ಯಾರ್ಥಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ನಡುವಿಲ್ ಪೋತ್ತುಕುಂಡ್ ಅತ್ತೀಲಿಥೆಯ ಸಿ.ಉಣ್ಣಿ ಅವರ ಮಗ ಆದಿತ್ಯನ್ ಅಲಿಯಾಸ್ ಅಪ್ಪುಸ್ (13) ಮೃತಪಟ್ಟ ಬಾಲಕ. ಈತ ನಡುವಿಲ್ ಹಯರ್ ಸೆಕೆಂಡರಿ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿಯಾಗಿದ್ದರು.

   ನಿನ್ನೆ ‌‌‌ (ಗುರುವಾರ) ಸಂಜೆ ಫುಟ್ಬಾಲ್ ಆಟ ಮುಗಿಸಿ ಸ್ನೇಹಿತರೊಂದಿಗೆ ಸ್ನಾನ ಮಾಡಲು ತೊರೆಗೆ (ಕಾಲುವೆಗೆ) ಹೋಗುವ ದಾರಿಯಲ್ಲಿ ಅವರು ಕುಸಿದುಬಿದ್ದಿದ್ದಾನೆ. ಕೂಡಲೇ ಆತನನ್ನು ಕರುವಂಚಾಲ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ. ಬಾಲಕನು ತನ್ನ ಅಜ್ಜ ಮತ್ತು ಅಜ್ಜಿಯೊಂದಿಗೆ ವಾಸಿಸುತ್ತಿದ್ದನು. ತಾಯಿ: ಸನಿತಾ. ಸಹೋದರರು: ಅರ್ಜುನ್, ಅಭಿರಾಮ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು