ದಾಖಲೆ ಸೃಷ್ಟಿಸಿದ ಸೇವಾಭಾರತಿ ಜೀವನಿಧಿ ಯೋಜನೆ; ಒಂದು ವರ್ಷದಲ್ಲಿ 1044 ಯುನಿಟ್ ರಕ್ತ ಪೂರೈಕೆ


 
ಕಾಸರಗೋಡು:    ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ 2025 ಅಕ್ಟೋಬರ್ ಒಂದರಿಂದ 2026 ಸೆಪ್ಟೆಂಬರ್ 31 ರ ವರೆಗಿನ ಒಂದು ವರ್ಷದ ಅವಧಿಯಲ್ಲಿ ಸೇವಾ ಭಾರತಿ ಜೀವ ನಿಧಿ ಕಾಸರಗೋಡು ಆಶ್ರಯದಲ್ಲಿ 1044 ಯುನಿಟ್ ರಕ್ತ ಪೂರೈಕೆ ಮಾಡಿ ದಾಖಲೆ ಸೃಷ್ಟಿಸಿದೆ. ಅ ಪ್ರಯುಕ್ತ ಕಾಸರಗೋಡು ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ಸೇವಾ ಭಾರತಿ ಜೀವ ನಿಧಿ ಕಾಸರಗೋಡು ಒಂದನೇ ಸ್ಥಾನ ಪಡೆದಿದೆ 

     ಈ ಒಂದು ವರ್ಷದಲ್ಲಿ ಕೇರಳ ರಾಜ್ಯದಲ್ಲಿ ಅತೀ ಹೆಚ್ಚು ರಕ್ತ ಸಂಗ್ರಹ ಮಾಡಿದ ಪ್ರಶಸ್ತಿ ಕಾಸರಗೋಡು ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಗೆ ದೊರಕಿದೆ (6000+ಯುನಿಟ್) ಹಾಗೂ ಸೇವಾ ಭಾರತಿ ಜೀವ ನಿಧಿ ಕಾಸರಗೋಡಿಗೆ ಅಧಿಕ ರಕ್ತದಾನಿಗಳನ್ನು ಕಳುಹಿಸಿ ರಕ್ತದಾನ ಮಾಡಿಸಿದ್ದಕ್ಕೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು

     ಸೇವಾ ಭಾರತಿ ಜೀವ ನಿಧಿ ಕಾಸರಗೋಡು ಕಡೆಯಿಂದ ಈ ಒಂದು ವರ್ಷದಲ್ಲಿ ಕಾಸರಗೋಡು ಹಾಗೂ ಮಂಗಳೂರು ಸೇರಿದಂತೆ ಬಂದ ಬೇಡಿಕೆಗೆ ತಕ್ಕಂತೆ 1748 ಯುನಿಟ್ ರಕ್ತದ ಪೂರೈಕೆ ಆಗಿರುತ್ತದೆ

ಈ ಗೌರವವು ನಮ್ಮ ಕರೆಗೆ ಓಗೊಟ್ಟು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಕೂಡಲೇ ಸ್ಪಂದನೆ ನೀಡಿ ರಕ್ತದಾನ ಮಾಡುವ ನಮ್ಮ ಪ್ರತಿಯೊಬ್ಬ ರಕ್ತದಾನಿಗೆ ಸೇರುತ್ತದೆಯೆಂದು ಸೇವಾಭಾರತಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು