ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಡಿ.ಶಂಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ಯಾವುದೇ ಕೊರತೆಯಿಲ್ಲದೆ ನಾಡಿನ ಜನತೆಯ ಸಹಕಾರದೊಂದಿಗೆ ಶಿಸ್ತುಬದ್ಧವಾಗಿ ಹಾಗೂ ಅಭೂತಪೂರ್ವ ರೀತಿಯಲ್ಲಿ ನಡೆಸಿ ಯಶಸ್ವಿಗೊಳಿಸಲಾಗುವುದು. ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಮತ್ತು ಸೌಕರ್ಯ ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಚೆಂಗಳ ಗ್ರಾಮಪಂಚಾಯತು ಅಧ್ಯಕ್ಷ ವಸಂತ ಅಜಕ್ಕೋಡು, ಎಣ್ಮಕಜೆ ಗ್ರಾಮಪಂಚಾಯತು ಅಧ್ಯಕ್ಷೆ ಕುಸುಮಾವತಿ, ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಕಾಸರಗೋಡು ಬ್ಲೋಕ್ ಪಂಚಾಯತು ಸ್ಥಾಯಿಸಮಿತಿ ಅಧ್ಯಕ್ಷ ಎಂ.ಎಸ್. ಮೊಯ್ದು ಗೋಳಿಯಡ್ಕ, ಬದಿಯಡ್ಕ ಗ್ರಾಮಪಂಚಾಯತು ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಹಮೀದ್ ಕೆಡೆಂಜಿ, ಜಿಲ್ಲಾ ಪಂಚಾಯತು ಸದಸ್ಯ ರಾಮಪ್ಪ ಮಂಜೇಶ್ವರ, ಬದಿಯಡ್ಕ ಗ್ರಾಮಪಂಚಾಯತು ಸದಸ್ಯರುಗಳಾದ ಗಂಗಾಧರ ಗೋಳಿಯಡ್ಕ, ಶ್ಯಾಮಪ್ರಸಾದ ಮಾನ್ಯ, ಮಧುಸೂದನ ಕಂಗಿಲ, ಶ್ಯಾಮಪ್ರಸಾದ ಸರಳಿ, ಪ್ರಮುಖರಾದ ಈಶ್ವರ ಭಟ್ ಪೆರ್ಮುಖ, ಉದನೇಶ್ವರ ಬದಿಯಡ್ಕ, ಸುಧಾಕರ ವಿದ್ಯಾಗಿರಿ, ಅನ್ವರ್ ಓಸೋನ್, ಶ್ರೀಕಾಂತ್, ಆನಂದ ಕೆ.ಮವ್ವಾರು, ಉಪಜಿಲ್ಲಾ ವಿದ್ಯಾಧಿಕಾರಿ ಅಶೋಕ್, ಅಧ್ಯಾಪಕ ಪ್ರಭಾಕರನ್ ನಾಯರ್, ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಶ್ರೀಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಾಪಕ ನಿರಂಜನ ರೈ ಸಂಘಟನಾ ಸಮಿತಿಯ ಹೆಸರುಗಳನ್ನು ಘೋಷಿಸಿದರು. ಅಧ್ಯಾಪಕರುಗಳಾದ ಪ್ರಸಾದ್, ರಾಜೇಶ್ ಅಗಲ್ಪಾಡಿ, ನಾರಾಯಣ ಆಸ್ರ, ಸಿಂಧು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶಾಹಿದಾ ಬೀವಿ ಸ್ವಾಗತಿಸಿ, ಉಪ ಮುಖ್ಯೋಪಾಧ್ಯಾಯರಾದ ಉಣ್ಣಿಕೃಷ್ಣನ್ ವಂದಿಸಿದರು.
ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವು ಅಕ್ಟೋಬರ್ 26,27ರಂದು ವೇದಿಕೆಯೇತರ ಸ್ಪರ್ಧೆಗಳು ಹಾಗೂ ನವಂಬರ್ 2,3,4, ತಾರೀಕುಗಳಂದು ವೇದಿಕೆ ಸ್ಪರ್ಧೆಗಳು ನಡೆಯಲಿದೆ. ಒಟ್ಟು 12 ವೇದಿಕೆಗಳನ್ನು ನಿರ್ಮಿಸಲಾಗುವುದು.

