ನಾರಂಪಾಡಿಯ ಹಿರಿಯ ಚಾಲಕ ವಿಕ್ಟರ್ ಡಿಸೋಜಾ ಯಾನೆ ಡ್ರೈವರ್ ಬಾಬಣ್ಣ. ನಿಧನ


ಬದಿಯಡ್ಕ: ನಾರಂಪಾಡಿಯ ಹಿರಿಯ ಚಾಲಕ ವಿಕ್ಟರ್ ಡಿಸೋಜಾ (75)(ಡ್ರೈವರ್ ಬಾಬಣ್ಣ ಇನ್ನಿಲ್ಲ) ನಾರಂಪಾಡಿಯಲ್ಲಿ ಹಲವಾರು ವರ್ಷಗಳಿಂದ ಲಾರಿ ಚಾಲಕರಾಗಿ ಬೆರಳೆಣಿಕೆಯಷ್ಟು ಡ್ರೈವಿಂಗ್ ಶಾಲೆಗಳು ಮಾತ್ರ ಹೊಂದಿರುವ ಕಾಲಘಟ್ಟದಲ್ಲಿ ಹಲವಾರು ಮಂದಿಗೆ ಚಾಲಕ ವೃತ್ತಿಯನ್ನು ಕಲಿಸಿ ಯುವಕರಿಗೆ ಉದ್ಯೋಗ ಲಭಿಸಲು ಕಾರಣಕರ್ತರಾಗಿದ್ದಾರೆ . ಕೆಲವು ವರ್ಷಗಳ ಹಿಂದೆ ಶಾನು ಮೋಲ್ ಲಾರಿ ಸರ್ವಿಸ್ ಎಂಬ ಉದ್ಯಮವನ್ನು ಆರಂಬಿಸಿದ ವಿಕ್ಟರ್ ಡಿಸೋಜ ಆ ಸಂಸ್ಥೆಯನ್ನು ಒಳ್ಳೆಯ ಮಟ್ಟಕ್ಕೆ ಬೆಳೆಸಿ ಪ್ರಸ್ತುತ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಅವರು ಪತ್ನಿ ಲೂಸಿ ಕ್ರಾಸ್ತಾ ಮಕ್ಕಳಾದ ಸುನಿತಾ, ವಿಜಯ, ಪ್ರಿಯಾ ಡಿಸೋಜ, ಸಂತೋಷ್ , ಮನೋಜ್  ಡಿಸೋಸ ಅಳಿಯಂದಿರಾದ ಫ್ರಾನ್ಸಿಸ್, ಬರ್ನಾಡ್, ರೊನಾಲ್ಡ್ ಸೊಸೆಯಂದಿರಾದ ಸೋನಿಯಾ, ಪ್ರಮೀಳಾ ಹಾಗೂ ಮೊಮ್ಮಕ್ಕಳು ಬಂಧುಮಿತ್ರರನ್ನು  ಆಗಲಿದ್ದಾರೆ . 
    ‌‌‌‌               ಬಿಜೆಪಿ ನೇತಾರ ಹರೀಶ್ ನಾರಂಪಾಡಿ , ಸಿಪಿಎಂ ನೇತಾರರಾದ ಗಿರೀಶ್, ಅಬ್ದುಲ್ ಲತೀಫ್ ಸಿ ಕೆ, ಕಾಂಗ್ರೆಸ್ ನೇತಾರ ಜೋನಿ ಏ ಪಿ ಸರ್ಕಲ್, ಕುಂಬ್ಡಾಜೆ ಗ್ರಾಮ ಪಂಚಾಯತ್ ಸದಸ್ಯೆ ಬಬಿತ ಮೊದಲಾದ ನೇತಾರರು ಮೃತರ ಮನೆಗೆ ಬೇಟಿ ನೀಡಿ ಅಂತಿಮ ದರ್ಶನ ಪಡೆದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು