ಬದಿಯಡ್ಕ: ಐತಿಹಾಸಿಕ ಹಿನ್ನೆಲೆಯುಳ್ಳ ಪ್ರಾಚೀನ ಪುಣ್ಯಕ್ಷೇತ್ರಗಳ ಪುನರುತ್ಥಾನ ನಮ್ಮೆಲ್ಲರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕರ್ತವ್ಯವಾಗಿದೆ ಎಂದು ಎಡನೀರು ಸಂಸ್ಥಾನದ ಜಗದ್ಗುರು ಶಂಕರಾಚಾರ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಸೋಮವಾರ ಅಪರಾಹ್ನ ನಡೆದ ಬೇಳ ಗ್ರಾಮದ ಮಾನ್ಯ ವಿಷ್ಣುಮೂರ್ತಿ ನಗರದಲ್ಲಿರುವ ಐತಿಹಾಸಿಕ ಶ್ರೀ ಮಹಾದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ ಹಾಗೂ ನಿಧಿ ಸಂಗ್ರಹ ಸಮರ್ಪಣಾ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ, ಜೀರ್ಣೋದ್ಧಾರ ನಿಧಿ ಸಂಗ್ರಹ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಸುಮಾರು ೧೩ನೇ ಶತಮಾನದ ಪ್ರಾಚೀನ ಇತಿಹಾಸ ಹೊಂದಿರುವ ಈ ಪುಣ್ಯಕ್ಷೇತ್ರವನ್ನು ಭಕ್ತರ ಸಹಕಾರದೊಂದಿಗೆ ಪುನರ್ನಿರ್ಮಿಸುವ ಕಾರ್ಯ ಶ್ಲಾಘನೀಯವಾಗಿದೆ. ಭಾರತದ ಉದ್ದಗಲ ಹರಡಿರುವ ಪುಣ್ಯ ಆರಾಧನಾಲಯಗಳು ಪ್ರಕೃತಿ ವಿಕೋಪ ಹಾಗೂ ಅನ್ಯರ ಆಕ್ರಮಗಳಿಂದ ಅವನತಿಗೊಂಡ ಉದಾಹರಣೆಗಳು ಅಲ್ಲಲ್ಲಿ ಕಾಣಸಿಗುತ್ತದೆ. ಆದರೆ ಕಾಲ ಪ್ರಾಪ್ತಿಗೊಂಡಾಗ ಜನರು ಒಗ್ಗಟ್ಟಾಗಿ ಅಂತಹ ಕ್ಷೇತ್ರಗಳನ್ನು ಪುನರುತ್ಥಾನಗೊಳಿಸುವುದರಿಂದ ನೆಮ್ಮದಿ ಮೂಡುತ್ತದೆ. ಒಗ್ಗಟ್ಟು ಹಾಗೂ ಲಕ್ಷö್ಯ ಪ್ರಾಪ್ತಿಗಾಗಿ ನಿರಂತರ ಶ್ರಮ ಯಶಸ್ಸಿಗೆ ಕಾರಣವಾಗುತ್ತದೆ. ಊರ, ಪರವೂರಿನ ಭಕ್ತರೆಲ್ಲರೂ ಒಗ್ಗಟ್ಟಿನಿಂದ ತನು, ಮನ, ಧನವನ್ನು ಸಮರ್ಪಿಸಿ ಈ ಪುಣ್ಯಕಾರ್ಯದಲ್ಲಿ ಕೈಜೋಡಿಸಬೇಕು. ಆ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶ್ರೀಗಳು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಮಾರ್ಗದರ್ಶನ ನೀಡಿ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಕ್ಷೇತ್ರದ ಪುನರುತ್ಥಾನ ಕಾರ್ಯ ಯಶಸ್ವಿಯಾಗಿ ನೆರವೇರಲಿ ಎಂದು ಅನುಗ್ರಹಿಸಿದರು. ಧಾರ್ಮಿಕ, ಸಾಮಾಜಿಕ ಮುಖಂಡ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು.
ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರದ ರೂಪುರೇಷೆಗಳು ಹಾಗೂ ಅಗತ್ಯತೆಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ವಾಸ್ತುಶಿಲ್ಪಿ ಕೃಷ್ಣಪ್ರಸಾದ್ ಮುನಿಯಂಗಳ ಉಪಸ್ಥಿತರಿದ್ದು ವಾಸ್ತು, ಜ್ಯೋತಿಷ್ಯ ಹಾಗೂ ಅವುಗಳು ಜನರ ಜೀವನದಲ್ಲಿ ನಿತ್ಯ ಬೀರುವ ಪ್ರಭಾವ, ಶಕ್ತಿಗಳ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಬದಿಯಡ್ಕ ಗ್ರಾಮ ಪಂಚಾಯಿತಿ ಜನಪ್ರತಿನಿಧಿ ರಜನಿ ಸಂದೀಪ್, ಉಪನ್ಯಾಸಕ ಕೃಷ್ಣಯ್ಯ ಮಾನ್ಯ, ವಾಸುದೇವ ಕೊಳತ್ತಾಯ ಉಪಸ್ಥಿತರಿದ್ದು ಮಾತನಾಡಿದರು. ಕಾರ್ಮಾರು ಸನ್ನಿಧಿಯ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಭಟ್ ಪುದುಕೋಳಿ, ಚೌಡೇಶ್ವರಿ ಸನ್ನಿಧಿಯ ಅಧ್ಯಕ್ಷ ಶ್ರೀನಿವಾಸ ಎಂ.ಕೊಡಗಿ, ಮೀನಾಡಿಪಳ್ಳ ಸನ್ನಿಧಿಯ ಗೌರವಾಧ್ಯಕ್ಷ ಗಣೇಶ ಭಟ್ ಮುಂಡೋಡು, ಚುಕ್ಕಿನಡ್ಕ ಅಯ್ಯಪ್ಪ ಮಂದಿರದ ಗುರುಸ್ವಾಮಿ ಕುಞÂಕಣ್ಣ ದಯಾನಂದ ಮುಂಡೋಡು ಉಪಸ್ಥಿತರಿದ್ದರು. ನವೀನಚಂದ್ರ ಎಂ.ಎಸ್.ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮಾನ್ಯ ಮಹಾದೇವ ಭಕ್ತವೃಂದದವರಿAದ ಭಜನಾ ಕಾರ್ಯಕ್ರಮ ನಡೆಯಿತು. ತಂತ್ರಿವರ್ಯರ ನೇತೃತ್ವದಲ್ಲಿ ಗಣಪತಿ ಹವನ ನೆರವೇರಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ, ಐತಿಹಾಸಿಕ ಶ್ರೀ ಮಹಾದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ಕ್ಷೇತ್ರದ ಪುನರುತ್ಥಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸಂಕಲ್ಪ ಮಾಡಿದರು.
