ಬದಿಯಡ್ಕ ಶ್ರೀ ಅಯ್ಯಪ್ಪ ಮಂದಿರದ ಪುನರ್ ಪ್ರತಿಷ್ಠಾ ಕಲಶೋತ್ವವ ಹಾಗೂ ಅಯ್ಯಪ್ಪ ತಿರುವಿಳಕ್ ಮಹೋತ್ಸವ; ಆಮಂತ್ರಣ ಪತ್ರಿಕೆ ಬಿಡುಗಡೆ


  ಬದಿಯಡ್ಕ ಶ್ರೀ ಅಯ್ಯಪ್ಪ ಮಂದಿರದ ಪುನರ್ ಪ್ರತಿಷ್ಠಾ ಕಲಶೋತ್ವವ ಹಾಗೂ ಅಯ್ಯಪ್ಪ ತಿರುವಿಳಕ್ ಮಹೋತ್ಸವವು 2026 ಡಿಸೆಂಬರ್ 4,5,6  ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಇದರ ಆಮಂತ್ರಣ ಪತ್ರಿಕೆಯನ್ನು ಹಿರಿಯ ಉದ್ಯಮಿಗಳು ಗೌರವ ಸಲಹೆಗಾರರು ಆಗಿರುವ ವಸಂತ ಪೈ ಅವರು  ಬಿಡುಗಡೆಗೊಳಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧುಸೂದನ ಆಯುರ್ ಮಂಗಳೂರು ವಹಿಸಿದರು.

    ಹಿರಿಯ ಗುರುಸ್ವಾಮಿ ಬಾಲಕೃಷ್ಣ ಮನಿಯಾಣಿ  ,ನಿತ್ಯಾನಂದ  ಶೇಣಿ,ಡಾ ಶ್ರೀನಿಧಿ ಸರಳಾಯ  ಮೊದಲಾದವರು ಮಾತನಾಎಇದರುಮ ಗಣೇಶ್ ಭಟ್ ಆಳಕ್ಕೆ,ದೇವದಾಸ್ ಕಾಮತ್, ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು ಉಪಸ್ಥಿತರಿದ್ದರು. ಅಯ್ಯಪ್ಪ ಸ್ವಾಮಿ ಟ್ರಸ್ಟ್ ಅಧ್ಯಕ್ಷ ನರೇಂದ್ರ ಬಿ ಸ್ವಾಗತಿಸಿ ಕಾರ್ಯದರ್ಶಿ ರಾಜೇಶ್ ಮಾಸ್ಟರ್ ಚಂಬಲ್ತಿ ಮಾರ್ ವಂದಿಸಿದರು. ಕೋಶಾಧಿಕಾರಿ ಗುರುಪ್ರಸಾದ್ ರೈ ಕೆ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು