ಸ್ವಚ್ಚತಾ ಕಾರ್ಯಕ್ರಮದ ವೇಳೆ ಕೆರೆಗೆ ಬಿದ್ದು 6 ವರ್ಷದ ಬಾಲಕಿ ಮೃತ್ಯು


 ಕಣ್ಣೂರು: ಪಿಣರಾಯಿಯ ಪಾನುಂಡೆಯಲ್ಲಿ ಕೆರೆ ಸ್ವಚ್ಛಗೊಳಿಸುವ ವೇಳೆ ಕೆರೆಗೆ ಬಿದ್ದು ಆರು ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪಾನುಂಡ ಲೈಬ್ರರಿ ಬಳಿಯ ರಂಜಿತ್ ಹಾಗೂ ಮಫೀದಾ ದಂಪತಿಯ ಪುತ್ರಿ ಮಿರ್ಸಾ ಮೃತಪಟ್ಟವಳು. ಇಂದು (ಭಾನುವಾರ) ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ದಾರುಣ ಘಟನೆ ಸಂಭವಿಸಿದೆ. ಮಿರ್ಸಾ ಎರಡನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯಾಗಿದ್ದಾಳೆ.

ಎರುವಟ್ಟಿಯ ಗ್ರೀನ್ ಪಾನುಂಡ ಸಂಘದ ನೇತೃತ್ವದಲ್ಲಿ ಸ್ಥಳೀಯರು ಪ್ರತಿ ಭಾನುವಾರ ನಡೆಸಿಕೊಂಡು ಬರುತ್ತಿದ್ದ ಸಾರ್ವಜನಿಕ ಸ್ವಚ್ಛತಾ ಕಾರ್ಯಗಳು ನಡೆಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ನೀರಿಲ್ಲದಿದ್ದ ಕೆರೆಗೆ ಮಗು ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಗಂಭೀರ ಗಾಯಗೊಂಡಿತ್ತು. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಕೂತುಪರಂಬ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು