ಬದಿಯಡ್ಕ: ಭಾರೀ ಮಳೆಯಿಂದಾಗಿ ಕುಸಿದು ಬಿದ್ದಿರುವ ಪೆರಡಾಲ ಸರಕಾರೀ ಹೈಸ್ಕೂಲಿನ ಗೋಡೆಯನ್ನು ಮರಳಿ ನಿರ್ಮಿಸುವಂತೆ ಜಿಲ್ಲಾ ಪಂಚಾಯತು ಸದಸ್ಯ ರಾಮಪ್ಪ ಮಂಜೇಶ್ವರ ಅವರು, ಜಿಲ್ಲಾ ಪಂಚಾಯತು ಅಧ್ಯಕ್ಷ ಸಾಬು ಅಬ್ರಹಾಂ ಅವರಿಗೆ ಮನವಿ ನೀಡಿದರು. ಗೋಡೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಜಾನುವಾರುಗಳು ಸಹಿತ ಶಾಲೆಯ ಕಂಪೌಂಡಿನೊಳಗೆ ಪ್ರವೇಶಿಸುವ ಸಾಧ್ಯತೆ ಇದೆ. ಆದುದರಿಂಸ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿರುವ ಜಿಲ್ಲಾ ಪಂಚಾಯತು ಅಧ್ಯಕ್ಷರು, ಕೂಡಲೇ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳನ್ನು ಶಾಲೆಗೆ ಕಳುಹಿಸಿ ಎಸ್ಟಿಮೇಟ್ ಸಿದ್ದಪಡಿಸಲು ಆದೇಶ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಜಿಲ್ಲಾ ಪಂಚಾಯತಿನ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಶಾಲೆಗೆ ಆಗಮಿಸಲಿದ್ದಾರೆ ಎಂದು ರಾಮಪ್ಪ ಮಂಜೇಶ್ವರ ಅವರು ತಿಳಿಸಿದ್ದಾರೆ
Tags
ಕಾಸರಗೋಡು
