ಕಿದೂರು ಬಳಿ ಕೋಳಿ ಅಂಕ‌ ನಿರತರಾಗಿದ್ದ 3 ಮಂದಿಯ ಸೆರೆ, 2 ಕೋಳಿ, 1030 ರೂ ವಶ


 ಕುಂಬಳೆ:  ಜನಸಂಚಾರವಿಲ್ಲದ ಜಾಗದಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ ಮೂವರನ್ನು ಎರಡು ಅಂಕದ ಕೋಳಿಗಳೊಂದಿಗೆ ಕುಂಬಳ ಪೊಲೀಸರು ಬಂಧಿಸಿದ್ದಾರೆ.

ಬೇಳ ಚೌಕಾರಿನ ಅಕ್ಷಯ್ (34), ಕುಂಬಳ ಕೀದೂರು ಶಾಲೆ ಸಮೀಪದ ಅರುಂತೋಡ್ ಹೌಸ್‌ನ ಜನಾರ್ಧನ (35) ಮತ್ತು ಮೀಯಪದವು ಮೀಂಜ ಅಡುಕ್ಕತ್ತ ಗುರಿಯ ಗಂಗಾಧರ (63) ಬಂಧಿತರಾಗಿದ್ದಾರೆ.

ನಿನ್ನೆ (ಸೋಮವಾರ) ಸಂಜೆ 5:30ಕ್ಕೆ ಕಿದೂರು  ಕ್ಷೇತ್ರ ಬಳಿಯ ಪಾಳುಬಿದ್ದ ಜಾಗದಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಕುಂಬಳ ಎಸ್‌ಐ ಗಣೇಶ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್ ತಂಡವನ್ನು ಕಂಡು ಕೆಲವರು ಓಡಿ ಪರಾರಿಯಾಗಿದ್ದು, ಇವರ ಕೈಯಿಂದ 1030 ರೂ. ವಶಪಡಿಸಿಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು