ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಜಿಲ್ಲಾಧಿಕಾರಿ ಕಛೇರಿಯ ಸಿಬಂದಿ‌ ಮೃತ್ಯು


 ಕಾಸರಗೋಡು:  ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಸರಗೋಡು ಜಿಲ್ಲಾಧಿಕಾರಿ ಕಛೇರಿಯ ಮಹಿಳಾ ಸಿಬಂದಿ ಚಿಕಿತ್ಸೆ ಫಲಕಾರಿಯಾಗದೆ ಕೋಜಿಕ್ಕೋಡು ಆಸ್ಪತ್ರೆಯಲ್ಲಿ ‌ಮೃತಪಟ್ಟ ಘಟನೆ ‌ನಡೆದಿದೆ. ಜಿಲ್ಲಾಧಿಕಾರಿ ಕಛೇರಿಯ ಸೀನಿಯರ್ ಕ್ಲರ್ಕ್,   ಎಡನೀರು ಬಳಿಯ ಅದ್ರುಗುಳಿ ನಿವಾಸಿ ಆಶಾಲತ.ಎ (41) ಆದಿತ್ಯವಾರ ಮಧ್ಯಾಹ್ನ ಮೃತಪಟ್ಟವರು.

ಕಳೆದ ಶುಕ್ರವಾರದಂದು ಈಕೆಯನ್ನು ಇಲಿ ವಿಷ ಸೇವಿಸಿದ ಅಸ್ವಸ್ಥ ಸ್ಥಿತಿಯಲ್ಲಿ ಮೊದಲಿಗೆ ಚೆಂಗಳ ಖಾಸಗಿ ಆಸ್ಪತ್ರೆ ಸೇರಿಸಲಾಗಿತ್ತು. ಆದರೆ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಬ ಅನಂತರ ಕೋಝಿಕ್ಕೋಡ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಕೋಜಿಕ್ಕೋಡು ಆಸ್ಪತ್ರೆಯಲ್ಲಿ ಆಕೆ‌ ಕೊನೆಯುಸಿರೆಳೆದರು.   ಈಕೆಯಿಂದ ಸಾವು ಸಂಭವಿಸುವ ಮುನ್ನ ಮಹಿಳಾ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು