ತಿರುವನಂತಪುರಂ: ರಾಜ್ಯದಲ್ಲಿ ಇಂದಿನಿಂದ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. ಕೇಂದ್ರ ಹವಾಮಾನ ಇಲಾಖೆಯು ಇಂದು ಮತ್ತು ನಾಳೆ ಯಾವುದೇ ಜಿಲ್ಲೆಗೂ ಮಳೆ ಮುನ್ಸೂಚನೆ (ಅಲರ್ಟ್) ನೀಡಿಲ್ಲ. ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಿತ್ತು. ಇಂದು ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಗುಜರಾತ್ ಕರಾವಳಿಯಿಂದ ಮಹಾರಾಷ್ಟ್ರ ಕರಾವಳಿಯವರೆಗಿನ ಕರಾವಳಿ ವಾಯುಭಾರ ಕುಸಿತದ ಮುಂಗಾರು ದ್ರೋಣಿಯು ದುರ್ಬಲಗೊಂಡಿದೆ. ಇವೆಲ್ಲವುಗಳ ಪ್ರಭಾವದಿಂದಾಗಿ ಮಂಗಳವಾರದವರೆಗೆ ರಾಜ್ಯದಲ್ಲಿ ಕೇವಲ ಸಾಧಾರಣ ಮಳೆಯಷ್ಟೇ ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ವೇಳೆ ದಕ್ಷಿಣ ಕನ್ನಡ, ಕೊಡಗು ಸಹಿತ ಕರ್ಣಾಟಕದ ವಿವಿದ ಜಿಲ್ಲೆಗಳಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ.
Tags
ತಿರುವನಂತಪುರಂ

