ಕುಂಬ್ಡಾಜೆ: ಕುಂಬ್ಡಾಜೆ ಗ್ರಾಮ ಪಂಚಾಯತು ವ್ಯಾಪ್ತಿಯ ಬೊಳಿಂಜ ಪೂಮಾಣಿ ಕಿನ್ನಿಮಾಣಿ ದೇವಸ್ಥಾನದ ಮುಂಭಾಗದಲ್ಲಿದ್ದ ಗೋಳಿ ಮರ ಧರಾಶಾಯಿಯಾಗಿ ಬಿದ್ದು ವಾಹನ ಸಂಚಾರ ಮೊಟಕುಗೊಂಡಿತು. ಈ ಮಾಹಿತಿ ತಿಳಿದ ಕುಂಬ್ಡಾಜೆ ಗ್ರಾಮ ಪಂಚಾಯತು ಅಧ್ಯಕ್ಷೆ, ಉಪಾಧ್ಯಕ್ಷರು ಸಹಿತ ಜನಪ್ರತಿನಿಧಿಗಳು ಆಗಮಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳ ಸಿಬಂದಿಗಳು ಆಗಮಿಸಿ ಮರ ಕಡಿದು ತೆರವುಗೊಳಿಸಲಾಯಿತು. ಬೆಳಗ್ಗೆ 10.30 ರಿಂದ 3 ಗಂಟೆಯ ವರೆಗೆ ತೆರವುಗೊಳಿಸುವ ಕೆಲಸ ನಡೆಯಿತು. ಗ್ರಾಮಪಂಚಾಯತು ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಇತರ ಜಪ್ರತಿನಿಧಿಗಳು ನೇತೃತ್ವ ವಹಿಸಿದ್ದರು.
Tags
ಕುಂಬ್ಡಾಜೆ
