ಕೇರಳ ಲಾಟರಿ ಓಣಂ ಬಂಪರ್ ಬಹುಮಾನ 30 ಕೋಟಿ ರೂ, ಜುಲೈ 17 ರಂದು ಬಿಡುಗಡೆ


 ತಿರುವನಂತಪುರಂ: ಲಾಟರಿ ಇಲಾಖೆಯ ಓಣಂ ಬಂಪರ್ ಮೊದಲನೇ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ. ಈ ಹಿಂದೆ 25 ಕೋಟಿ ರೂಪಾಯಿಯಾಗಿದ್ದ ಪ್ರಥಮ ಬಹುಮಾನದ ಮೊತ್ತವನ್ನು ಈ ಬಾರಿ 30 ಕೋಟಿ ರೂಪಾಯಿಗೆ ಏರಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದೇ ವೇಳೆ, ಬಹುಮಾನದ ರಚನೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಈ ಹಿಂದೆ 50 ಲಕ್ಷ ರೂಪಾಯಿಯಾಗಿದ್ದ ಮೂರನೇ ಬಹುಮಾನವನ್ನು 25 ಲಕ್ಷ ರೂಪಾಯಿಗೆ ಇಳಿಸಲಾಗಿದೆ.

ಓಣಂ ಬಂಪರ್ ಲಾಟರಿ ಟಿಕೇಟ್ ಬಿಡುಗಡೆಯನ್ನು ಜುಲೈ 17 ರಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ನೆರವೇರಿಸಲಿದ್ದಾರೆ ಎಂದು ಇಲಾಖೆಯ ನಿರ್ದೇಶಕಿ ಅಂಜು ಕೆ.ಎಸ್. ತಿಳಿಸಿದ್ದಾರೆ. ಟಿಕೇಟ್ ಬೆಲೆ 500 ರೂ. ಆಗಿದ್ದು ಯಾವುದೇ ಬದಲಾವಣೆ ಇರುವುದಿಲ್ಲ. ದೇಶದಲ್ಲೇ ಇಷ್ಟೊಂದು ದೊಡ್ಡ ಮೊತ್ತವನ್ನು ಲಾಟರಿ ಬಹುಮಾನವಾಗಿ ನೀಡುತ್ತಿರುವುದು ಕೇರಳದಲ್ಲಿ ಮಾತ್ರ ಎಂಬುದು ಗಮನಾರ್ಹ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು