ಕೃಷಿ ಕೆಲಸದ ನಡುವೆ ಬಿಜೆಪಿ ನಾಯಕ ಕುಸಿದು ಬಿದ್ದು ಮೃತ್ಯು


  ಕೃಷಿ ಕೆಲಸದ ನಡುವೆ ಬಿಜೆಪಿ  ನಾಯಕ ಕುಸಿದು ಬಿದ್ದು ನಿಧನರಾಗಿದ್ದಾರೆ. ಪಿಲಿಕೋಡ್ ಸರ್ಕಾರಿ ಯು.ಪಿ. ಶಾಲೆಯ ಸಮೀಪದ ಕೆ.ಟಿ.ವಿ. ಮೋಹನನ್ (59) ಮೃತಪಟ್ಟವರು. ನಿನ್ನೆ   (ಭಾನುವಾರ) ಮನೆಯ ತೋಟದಲ್ಲಿ  ಗೆಣಸು ಕೃಷಿಗಾಗಿ ಮಣ್ಣು ಗುಡ್ಡೆ ಹಾಕುತ್ತಿದ್ದಾಗ ಕುಸಿದು ಬಿದ್ದ ಮೋಹನನ್ ಅವರನ್ನುಚೆರುವತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕಿಸಲು ಸಾಧ್ಯವಾಗಲಿಲ್ಲ. ಅಂತ್ಯಸಂಸ್ಕಾರವು ಇಂದಯ (ಸೋಮವಾರ) ಬೆಳಿಗ್ಗೆ ಸಮುದಾಯದ ಸ್ಮಶಾನದಲ್ಲಿ ನಡೆಯಲಿದೆ.

ಇವರು ಬಿಜೆಪಿಯ ಮಾಜಿ ತೃಕ್ಕರಿಪ್ಪೂರು ಮಂಡಲ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತರಾಗಿದ್ದರು. ಮಾವುಂಗಾಲ್ ಕ್ಯಾಂಪ್ಕೋದಲ್ಲಿ  ತಲೆ ಹೊರೆ ಕಾರ್ಮಿಕರಾಗು ಕೆಲಸ ಮಾಡುತ್ತಿದ್ದರು. ಇವರು ದಿವಂಗತ ವಿ.ವಿ. ಚಾತು ಮತ್ತು ಕೆ.ಟಿ.ವಿ. ಪಾಟಿಯಮ್ಮ ದಂಪತಿಯ ಪುತ್ರರಾಗಿದ್ದಾರೆ. ಮೃತರು ಪತ್ನಿ ರುಕ್ಮಿಣಿ, ಮಕ್ಕಳಾದ ರಾಹುಲ್ (ಮರ್ಚೆಂಟ್ ನೇವಿ), ಆತಿರ,ಅಳಿಯ ರಾಕೇಶ್,  ಸಹೋದರಿ  ಕೆ.ಟಿ.ವಿ. ಬಾಲಮಣಿ ಎಂಬಿವರನ್ನು ಅಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು